ವಾಷಿಂಗ್ಟನ್: ಒಂದು ವೇಳೆ ಉಗ್ರರನ್ನು ಮಟ್ಟ ಹಾಕಲು ನೀವು ವಿಫಲರಾದರೇ ಆ ಕೆಲಸವನ್ನು ನಾವೇ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆಕಠಿಣ ಎಚ್ಚರಿಕೆಯನ್ನು ರವಾನಿಸಿದೆ.
ಪಾಕಿಸ್ತಾನ ಉಗ್ರಗಾಮಿ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು, ಪಾಕ್ ನೆಲದಲ್ಲಿರುವ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಬೇಕೆಂದು ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ ಸನ್ ಹೇಳಿದ್ದಾರೆ.
ಅಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಭಾರತಕ್ಕೆ ಭೇಟಿ ನೀಡಿದ ನಂತರ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ ಸನ್ ಅವರು ಈ ಹೇಳಿಕೆ ನೀಡಿರುವುದಾಗಿ ರಾಜ್ಯ ಇಲಾಖೆಯ ವಕ್ತಾರ ಹೀದರ್ ನೌರ್ಟ್ ತಿಳಿಸಿದ್ದಾರೆ.
ಗಡಿಯಲ್ಲಿ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳನ್ನು ಮಟ್ಟ ಹಾಕಬೇಕೆಂದು ನಾವು ಹಲವು ಬಾರಿ ಪಾಕಿಸ್ತಾನಕ್ಕೆ ತಿಳಿಸಿದ್ದೇವೆ.ಈ ಸಂಬಂಧ ನಾವು ಪಾಕಿಸ್ತಾನದಿಂದ ಹೆಚ್ಚಿನ ನಿರೀಕ್ಷೆ ಹೊಂದಿದ್ದೇವೆ ಎಂದು ನೌರ್ಟ್ ಹೇಳಿದ್ದಾರೆ.
ನಾವು ಯಾವುದೇ ಬೇಡಿಕೆಯ ಇಡುತ್ತಿಲ್ಲ, ನಮಗೆ ಏನು ಬೇಕೋ ಅದನ್ನು ಮಾಡಿ ಎಂದು ನಾವು ಪಾಕಿಸ್ತಾನವನ್ನು ಕೇಳುತ್ತಿದ್ದೇವೆ. ನಿಮ್ಮದು ಸೌರ್ವಭೌಮತ್ವ ರಾಷ್ಟ್ರ, ನಿಮಗೆ ಏನು ಬೇಕೆಂದು ನಿರ್ಧರಿಸಿ, ಆದರೆ ಅರ್ಥ ಮಾಡಿಕೊಳ್ಳಿ, ನಾವು ಯೋಚಿಸುತ್ತಿರುವು ತೀರಾ ಅವಶ್ಯಕವಾದದ್ದು, ಒಂದು ವೇಳಎ ನಿಮಗೆ ಅದು ಬೇಡ ಎನಿಸಿದರೇ ಅದನ್ನು ನೀವು ಮಾಡಬೇಡಿ, ಇದೇ ಕೆಲಸವನ್ನು ನಾವು ಬೇರೆ ಮಾರ್ಗದಲ್ಲಿ ಮಾಡಲು ನಮಗೆ ತಿಳಿದಿದೆ ಎಂದು ಟಿಲ್ಲರ್ ಸನ್ ಪಾಕಿಸ್ತಾನಕ್ಕೆ ಸಂದೇಶ ರವಾನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics