ವಿದೇಶ

ಬ್ರಿಕ್ಸ್ ಶೃಂಗಸಭೆ ನಿರ್ಣಯದ ಬೆನ್ನಲ್ಲೇ ಚೀನಾಗೆ ತೆರಳಲಿರುವ ಪಾಕ್ ವಿದೇಶಾಂಗ ಸಚಿವ

Srinivas Rao BV
ಬೀಜಿಂಗ್: ಬ್ರಿಕ್ಸ್ ಶೃಂಗಸಭೆಯಲ್ಲಿ ಭಯೋತ್ಪಾದಕ ಸಂಘಟನೆಗಳ ವಿರುದ್ಧ ನಿರ್ಣಯ ಅಂಗೀಕರಿಸಿರುವ ಬೆನ್ನಲ್ಲೇ ಪಾಕಿಸ್ತಾನದ ವಿದೇಶಾಂಗ ಸಚಿವ ಮೊಹಮ್ಮದ್ ಆಸೀಫ್ ಮುಂದಿನ ವಾರ ಚೀನಾಗೆ ತೆರಳಲಿದ್ದಾರೆ. 
ಬ್ರಿಕ್ಸ್ ಶೃಂಗಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಪಾಕಿಸ್ತಾನ ವಿದೇಶಾಂಗ ಸಚಿವರು ಚೀನಾದ ಸಚಿವರೊಂದಿಗೆ ಚರ್ಚಿಸಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಾಕಿಸ್ತಾನದ ಭಯೋತ್ಪಾದನೆಯನ್ನು ಖಂಡಿಸಿದ್ದ ಚೀನಾ ಬ್ರಿಕ್ಸ್ ನಿರ್ಣಯವನ್ನು ತನ್ನ ಮಹತ್ವಾಕಾಂಕ್ಷಿ ಯೋಜನೆಯಾದ ಸಿಪಿಇಸಿ ಗೆ ಧಕ್ಕೆ ಉಂಟಾಗದಂತೆ ಜಾರಿಗೊಳಿಸಬಹುದು ಎಂಬುದರ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. 
ಇದೇ ವೇಳೆ ಪಾಕಿಸ್ತಾನ ಬ್ರಿಕ್ಸ್ ನಿರ್ಣಯವನ್ನು ತಿರಸ್ಕರಿಸಿದ್ದು, ಪಾಕ್ ವಿದೇಶಾಂಗ ಸಚಿವರು ನಿರ್ಣಯ ಕೈಗೊಳ್ಳುವ ವೇಳೆ ಬ್ರಿಕ್ಸ್ ರಾಷ್ಟ್ರಗಳೊಂದಿಗೆ ಚೀನಾ ಕೈ ಜೋಡಿಸಿದ್ದರ ಬಗ್ಗೆ ಆಕ್ಷೇಪಿಸಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. 
SCROLL FOR NEXT