ವಿದೇಶ

ಇರ್ಮಾ ಚಂಡಮಾರುತ ಭೀತಿ: ಭಾರೀ ಸಂಖ್ಯೆಯಲ್ಲಿ ಸ್ಥಳಾಂತರಗೊಂಡ ಫ್ಲೋರಿಡಾ ಜನತೆ

Sumana Upadhyaya

ಮಿಯಾಮಿ: ಅಮೆರಿಕಾದ ಫ್ಲೋರಿಡಾ ರಾಜ್ಯಕ್ಕೆ ಇರ್ಮಾ ಚಂಡಮಾರುತ ಪ್ರಭಾವ ಬೀರಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗುತ್ತಿದ್ದಾರೆ.

ಚಂಡಮಾರುತದ ಭೂದೃಶ್ಯ ನೈಋತ್ಯವನ್ನು ಅತ್ಯಧಿಕ ಜನಸಾಂದ್ರತೆ ಹೊಂದಿರುವ ಮಿಯಾಮಿ ಮೆಟ್ರೊ ನಿಲ್ದಾಣದತ್ತ ಬದಲಾಯಿಸುವ ಇತ್ತೀಚಿನ ಮುನ್ಸೂಚನೆ ಸಿಕ್ಕಿದೆ.
ತೀವ್ರ ಪ್ರಭಾವದ ಇರ್ಮಾ ಚಂಡಮಾರುತ ನಿನ್ನೆ ಗಂಟೆಗೆ ಸುಮಾರು 260 ಕಿಲೋ ಮೀಟರ್ ವೇಗದಲ್ಲಿ ಚಂಡಮಾರುತದ ಬಿರುಗಾಳಿ ಅಪ್ಪಳಿಸಿದೆ. ನಾಳೆ ಬೆಳಗ್ಗೆ ಫ್ಲೋರಿಡಾದ ಪ್ರಮುಖ ಭಾಗಗಳಲ್ಲಿ ಬೀಸುವ ಸಾಧ್ಯತೆಯಿದ್ದು ಮಧ್ಯಾಹ್ನದ ನಂತರ ರಾಜ್ಯದ ನೈರುತ್ಯ ಕರಾವಳಿಗೆ ವಾಲುವ ಸಾಧ್ಯತೆಯಿದೆ ಎನ್ನಲಾಗಿದೆ.

ಫ್ಲೋರಿಡಾದ ಸುಮಾರು 5.6 ದಶಲಕ್ಷ ಜನರಿಗೆ ಅಂದರೆ ಆ ರಾಜ್ಯದ ಕಾಲು ಭಾಗ ಜನರನ್ನು ಬೇರೆಡೆಗೆ ಸ್ಥಳಾಂತರವಾಗುವಂತೆ ಸೂಚಿಸಲಾಗಿದೆ ಮತ್ತು 5,40,000 ಜನರನ್ನು ಜಾರ್ಜಿಯಾ ತೀರ ತೊರೆಯುವಂತೆ ಹೇಳಲಾಗಿದೆ.   ಅಧಿಕಾರಿಗಳು ಜನರಿಗೆ ತಾತ್ಕಾಲಿಕ ಆಶ್ರಯತಾಣಗಳನ್ನು ತೆರೆದಿದ್ದಾರೆ. ಅಟ್ಲಾಂಟದ ಹೊಟೇಲ್ ಗಳು ನಿರ್ವಸಿತರಿಂದ ತುಂಬಿ ಹೋಗಿದೆ.

ಫ್ಲೋರಿಡಾವನ್ನು ತೊರೆಯಲು ನಿರ್ಧರಿಸಿದ್ದು ಇಂದು ರಾತ್ರಿ ತೊರೆಯದಿದ್ದರೆ ನಿಮ್ಮ ಅಪಾಯದಲ್ಲಿ  ಭಾರೀ ಚಂಡಮಾರುತದ ಅಪಾಯವನ್ನು ಎದುರಿಸಲು ಸಿದ್ದರಿದ್ದರೆ ಇರಿ ಎಂದು ಫ್ಲೋರಿಡಾದ ರಾಜ್ಯಪಾಲ ರಿಕ್ ಸ್ಕಾಟ್ ತಿಳಿಸಿದ್ದಾರೆ.

SCROLL FOR NEXT