ವಿದೇಶ

ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಲು ಶಾಂಘೈ ಸಹಕಾರ ಸಂಘಟನೆ ಮೇಲೆ ಭಾರತದ ಒತ್ತಡ

Srinivas Rao BV
ಬೀಜಿಂಗ್: ಭಯೋತ್ಪಾದನೆ ವಿರುದ್ಧ ಹೋರಾಡಲು ಶಾಂಘೈ ಸಹಕಾರ ಸಂಘಟನೆ ನೆರವಾಗಬೇಕು ಎಂದು ಭಾರತ ಕರೆ ನೀಡಿದೆ. 
ಬೀಜಿಂಗ್ ನಲ್ಲಿ ಶಾಂಘೈ ಸಹಕಾರ ಸಂಘಟನೆ ಆಯೋಜಿಸಿದ್ದ ಪ್ರಾದೇಶಿಕ ಭಯೋತ್ಪಾದನೆ ವಿರೋಧಿ ಪರಿಷತ್ (ಆರ್ ಎಟಿಎಸ್) ನ 31 ನೇ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಭಾರತದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಆರ್.ಎನ್ ರವಿ, ಭಯೋತ್ಪಾದನೆಯನ್ನು ಸಮರ್ಥವಾಗಿ ಎದುರಿಸಲು ಎಸ್ ಸಿಒ-ಆರ್ ಎಟಿಎಸ್ ನಿಂದ ಭಾರತ ರಚನಾತ್ಮಕ ಸಹಕಾರವನ್ನು ಎದುರುನೋಡುತ್ತಿದೆ ಎಂದು ಹೇಳಿದ್ದಾರೆ. 
ಆರ್ ಎಟಿಎಸ್ ನ ಸಭೆಯಲ್ಲಿ ಅಂತಾರಾಷ್ಟ್ರೀಯ ಹಾಗೂ ಪ್ರಾದೇಶಿಕ ಭದ್ರತೆಯ ಬಗ್ಗೆ ಚರ್ಚೆ ನಡೆದಿದೆ.
SCROLL FOR NEXT