ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮತ್ತೊಂದು ಬಾಂಬ್ ಸ್ಫೋಟ ನಡೆದಿದ್ದು 8 ಜನರು ಸಾವನ್ನಪ್ಪಿದ್ದಾರೆ. ರಿಮೋಟ್ ನಿಯಂತ್ರಿತ ಸ್ಫೋಟ ಇದಾಗಿದ್ದು, ರಸ್ತೆ ಬದಿಯಲ್ಲಿ ಬಾಂಬ್ ಸ್ಫೋಟಗೊಂಡಿದೆ.
ಲೋಯಿ ಮಮೋಂದ್ ಪ್ರದೇಶದಲ್ಲಿ ಭದ್ರತಾ ಪಡೆಗಳ ವಾಹನ ಸಂಚರಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಬಾಂಬ್ ಸ್ಫೋಟದಲ್ಲಿ ಸರ್ಕಾರಿ ಅಧಿಕಾರಿಗಳೂ ಮೃತಪಟ್ಟಿದ್ದಾರೆ.