ಉತ್ತರ ಕೊರಿಯಾ-ಅಮೆರಿಕ ನಡುವಿನ ಸಂಬಂಧ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಇಯಾ ಸರ್ವಾಧಿಕಾರಿ ಕಿಮ್ ಜಾಂಗ್ ಟ್ವೀಟ್ ಯುದ್ಧ ನಡೆಸಿದ್ದಾರೆ.
ಕಿಮ್ ಡೊನಾಲ್ಡ್ ಟ್ರಂಪ್ ಅವರನ್ನು ಮೂರ್ಖ ಎಂಬ ಅರ್ಥ ಬರುವ ಶಬ್ದದಿಂದ ಟೀಕಿಸಿದ್ದು, ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವಾ ಡೊನಾಲ್ಡ್ ಟ್ರಂಪ್ ಉತ್ತರ ಕೊರಿಯಾದ ಸರ್ವಾಧಿಕಾರಿಗೆ ಹಿಂದೆಂದೂ ಎದುರಾಗದಂತಹ ಅಗ್ನಿಪರೀಕ್ಷೆಯೊಡ್ಡುವುದಾಗಿ ಎಚ್ಚರಿಸಿದ್ದಾರೆ.
ಇದೇ ವೇಳೆ ಕಿಮ್ ತನ್ನ ದೇಶದ ಜನರನ್ನೇ ಉಪವಾಸವಿರಿಸುತ್ತಿದ್ದು, ಉತ್ತರ ಕೊರಿಯಾದಲ್ಲಿ ಆಹಾರದ ಕೊರತೆ ಎದುರಾಗಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.