ಸಂಗ್ರಹ ಚಿತ್ರ 
ವಿದೇಶ

ಉತ್ತರ ಕೊರಿಯಾದ 'ರಾಕೆಟ್ ಮ್ಯಾನ್' ನನ್ನು ಬಹಳ ಹಿಂದೆಯೇ ಒಂದು ಕೈ ನೋಡಿಕೊಳ್ಳಬೇಕಿತ್ತು: ಟ್ರಂಪ್

ಉತ್ತರ ಕೊರಿಯಾದ ರಾಕೆಟ್ ಮ್ಯಾನ್ ಗಳನ್ನು ಬಹಳ ಹಿಂದೆಯೇ ನಿರ್ವಹಿಸಬೇಕಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.

ಅಲಬಾಮಾ: ಉತ್ತರ ಕೊರಿಯಾದ ರಾಕೆಟ್ ಮ್ಯಾನ್ ಗಳನ್ನು ಬಹಳ ಹಿಂದೆಯೇ ನಿರ್ವಹಿಸಬೇಕಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.
ಅಮೆರಿಕದ ಅಲಬಾಮಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಮತ್ತು ಆತನ ತಂದೆ ಕಿಮ್ ಜಾಂಗ್ ಇಲ್ ವಿರುದ್ಧ ಕಿಡಿಕಾರಿದ್ದು, ಈ ಇಬ್ಬರು ರಾಕೆಟ್ ಮ್ಯಾನ್ ಗಳನ್ನು  ಬಹಳ ಹಿಂದೆಯ ನಿರ್ವಹಿಸಬೇಕಿತ್ತು ಎಂದು ಹೇಳಿದ್ದಾರೆ. ಇದೇ ವೇಳೆ ಮಾಜಿ ಅಧ್ಯಕ್ಷ ಬರಾಕ್ ಒಬಾಮಸ ಬಿಲ್ ಕ್ಲಿಂಟನ್ ಸೇರಿದಂತೆ ಅಮೆರಿಕದ ಮಾಜಿ ಅಧ್ಯಕ್ಷರುಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಟ್ರಂಪ್, ಅಮೆರಿಕ  ಈ ರಾಕೆಟ್ ಮ್ಯಾನ್ ಗಳನ್ನು ಬಹಳ ಹಿಂದೆಯೇ ಕಟ್ಟಿಹಾಕಿದ್ದರೆ ಅವರು ಇಂದು ಈ ಮಟ್ಟಿಗೆ ಬೆಳೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂದರೆ ಈ ಚಿಕ್ಕ ರಾಕೆಟ್ ಮ್ಯಾನ್ ನನ್ನು ನಿಗ್ರಹಿಸದಿದ್ದರೆ ಮುಂದೆ ಜಗತ್ತಿಗೆ ಖಂಡಿತಾ ಅಪಾಯ ಕಾದಿದೆ. ಹೀಗಾಗಿ ಆ ಕೆಲಸವನ್ನು ನಾವೇ ಮಾಡಬೇಕಿದೆ. ಉತ್ತರ ಕೊರಿಯಾದ ಅಣ್ವಸ್ತ್ರ ಯೋಜನೆಗಳು ಜಾಗತಿಕ ಭದ್ರತೆ ದೊಡ್ಡ ಅಪಾಯ ತಂದೊಡ್ಡಿದೆ. ಇದು ನಿಜಕ್ಕೂ ಸ್ವೀಕಾರಾರ್ಹವಲ್ಲ. ಈ ಹಿಂದಿನ ಸರ್ಕಾರಗಳು ಮಾಡಿದ ನಿರ್ಲಕ್ಷ್ಯವನ್ನು ತಾವು ಮಾಡುವಂತಿಲ್ಲ ಎಂದು ಹೇಳುವ ಮೂಲಕ ಟ್ರಂಪ್ ಉತ್ತರ ಕೊರಿಯಾ ವಿರುದ್ಧ ತಾವು ಸಮರ ಸಾರಲು ಸಿದ್ಧ ಎಂದು ಹೇಳಿದ್ದಾರೆ.

ಈ ಹಿಂದೆ ಟ್ವಿಟರ್ ನಲ್ಲಿ ಕಿಮ್ ಜಾಂಗ್ ವಿರುದ್ಧ ಕಿಡಿಕಾರಿದ್ದ ಟ್ರಂಪ್ ಕಿಮ್ ಜಾಂಗ್ ಉನ್ ನನ್ನು ಹುಚ್ಚ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದ ಕಿಮ್ ಜಾಂಗ್ ಉನ್ ಟ್ರಂಪ್ ರನ್ನು ಬೊಗಳುವ ನಾಯಿ ಎಂದು ಜರಿದಿದ್ದರು. ಉಭಯ ನಾಯಕರ ಕೆಸರೆರಚಾಟ ಇನ್ನೂ ಟ್ವಿಟರ್ ನಲ್ಲಿ ಮುಂದುವರೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT