ನವದೆಹಲಿ: ಒಂಬತ್ತು ರಹಸ್ಯ ತಾಣಗಳಲ್ಲಿ ಪಾಕಿಸ್ತಾನ ಅಣ್ವಸ್ತ್ರಗಳನ್ನು ದಾಸ್ತಾನು ಇಟ್ಟಿರುವುದನ್ನು ಅಮೆರಿಕ ಬಹಿರಂಗಪಡಿಸಿದೆ.
ಒಂಬತ್ತು ರಹಸ್ಯ ತಾಣಗಳ ಪೈಕಿ ಮೂರು ಸಿಂಧ್ ಪ್ರಾಂತ್ಯದ ಸಮೀಪದಲ್ಲೇ ಇವೆ. ಇನ್ನು ಬಲೂಚಿಸ್ತಾನ ಮತ್ತು ಖೈಬರ್ ಪಖ್ ತೂನ್ ಖ್ವಾ ಸಮೀಪ ತಲಾ ಒಂದ ರಹಸ್ಯ ತಾಣ ಇವೆ. ಈ ವರದಿಯನ್ನು ಅಮೆರಿಕ ವಿಜ್ಞಾನಿಗಳ ಒಕ್ಕೂಟದ ವರದಿಯನ್ನು ಹ್ಯಾನ್ಸ್ ಕ್ರಿಸ್ಟನ್ ಸನ್ ಮತ್ತು ರಾಬರ್ಟ್ ಎಸ್ ನೋರಿಸ್ ಸಿದ್ಧಪಡಿಸಿದ್ದಾರೆ.
ಸದ್ಯ ಪಾಕಿಸ್ತಾನ 130 ರಿಂದ 140ರಷ್ಟು ಅಣ್ವಸ್ತ್ರಗಳನ್ನು ಹೊಂದಿದ್ದು ಅವುಗಳ ಸಂಖ್ಯೆಯನ್ನು ಕ್ಷಿಪ್ರ ಗತಿಯಲ್ಲಿ ಹೆಚ್ಚು ಮಾಡುವ ಎಲ್ಲ ಕೆಲಸಗಳನ್ನು ಕೈಗೊಂಡಿದೆ. ಅಷ್ಟೇ ಇಲ್ಲದೇ ಮುಖ್ಯವಾಗಿ ಈ ಅಣ್ವಸ್ತ್ರಗಳನ್ನು ಅಗತ್ಯವಿರುವ ಜಾಗಕ್ಕೆ ಅತ್ಯಂತ ಕ್ಷಿಪ್ರ ಗತಿಯಲ್ಲಿ ಸಾಗಿಸುವ ಪೂರೈಸುವ ಸೌಕರ್ಯಗಳನ್ನು ಕೂಡ ಪಾಕಿಸ್ತಾನ ರೂಪಿಸಿಕೊಂಡಿದೆ ಎಂದು ಅಮೆರಿಕ ಹೇಳಿದ್ದು ಇವು ಪಾಕಿಸ್ತಾನ ಉಗ್ರರ ಕೈವಶವಾಗುವ ಭೀತಿಯನ್ನು ವ್ಯಕ್ತಪಡಿಸಿದೆ.
ಪಾಕಿಸ್ತಾನ ಅಣ್ವಸ್ತ್ರ ದಾಸ್ತಾನು ಮಾಡಿರುವ 9 ರಹಸ್ಯ ತಾಣಗಳು
* ಗುಜರನ್ ವಾಲಾ ಗ್ಯಾರಿಸನ್ ಪಂಜಾಬ್
* ಖುಜ್ ದರ್ ಗ್ಯಾರಿಸನ್ ಬಲೂಚಿಸ್ತಾನ
* ಮಸ್ ರೂರ್ ಡಿಪೋ ಕರಾಚಿ, ಸಿಂಧ್
* ನ್ಯಾಷನಲ್ ಡೆವಲಪ್ ಮೆಂಟ್ ಕಾಂಪ್ಲೆಕ್ಸ್ ಫತೇಗಂಜ್, ಪಂಜಾಬ್
* ತರ್ ಬಲಾ ಭೂಗತ ಡಿಪೋ, ಖೈಬರ್ ಪಖ್ ತೂನ್ ಖ್ವಾ
* ವಾಹ್ ಶಸ್ತ್ರಾಸ್ತ್ರ ಕಾರ್ಖಾ, ಪಂಜಾಬ್