ಇಸಿಸ್ ಉಗ್ರರು (ಸಂಗ್ರಹ ಚಿತ್ರ) 
ವಿದೇಶ

ಅಮೆರಿಕ-ಅಫ್ಘಾನಿಸ್ತಾನ ಸೇನೆ ಜಂಟಿ ಕಾರ್ಯಾಚರಣೆ: 22 ಪಾಕ್, ಇಸಿಸ್ ಉಗ್ರರ ಹತ್ಯೆ

ಅಮೆರಿಕಾ ಮತ್ತು ಅಫ್ಘಾನಿಸ್ತಾನ ಸೇನಾ ಪಡೆ ಅಫ್ಘಾನಿಸ್ತಾನದ ಪೂರ್ವ ನಂಗಾಹಾರ್ ಪ್ರಾಂತ್ರಯದಲ್ಲಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಇಸಿಸ್ ಉಗ್ರ ಸಂಘಟನೆ ಸೇರಿದ 22 ಉಗ್ರರನ್ನು ಹತ್ಯೆ ಮಾಡಿದೆ ಎಂದು ಭಾನುವಾರ ತಿಳಿದುಬಂದಿದೆ...

ಕಾಬುಲ್: ಅಮೆರಿಕಾ ಮತ್ತು ಅಫ್ಘಾನಿಸ್ತಾನ ಸೇನಾ ಪಡೆ ಅಫ್ಘಾನಿಸ್ತಾನದ ಪೂರ್ವ ನಂಗಾಹಾರ್ ಪ್ರಾಂತ್ರಯದಲ್ಲಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಇಸಿಸ್ ಉಗ್ರ ಸಂಘಟನೆ ಸೇರಿದ 22 ಉಗ್ರರನ್ನು ಹತ್ಯೆ ಮಾಡಿದೆ ಎಂದು ಭಾನುವಾರ ತಿಳಿದುಬಂದಿದೆ. 

ನಾಜಿಯಾನ್ ಮತ್ತು ಲಾಲ್ಪುರ್ ಜಿಲ್ಲೆಗಳಲ್ಲಿ ಅಮೆರಿಕ ಹಾಗೂ ಅಫ್ಘಾನಿಸ್ತಾನ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು 22 ಉಗ್ರರನ್ನು ಹತ್ಯೆ ಮಾಡಿದೆ ಎಂದು ಅಫ್ಘಾನಿಸ್ತಾನದ ಪ್ರಾಂತೀಯ ಸರ್ಕಾರಿ ಮಾಧ್ಯಮ ಕಚೇರಿ ಹೇಳಿಕೊಂಡಿದೆ. 

ಲಾಲ್ಪುರ್ ಜಿಲ್ಲೆಯ ಬಿಲಾ ಪ್ರದೇಶದಲ್ಲಿ ಅಫಾನಿಸ್ತಾನ ವಿಶೇಷ ಪಡೆ ಶುಕ್ರವಾರ ನಡೆಸಿದ್ದ ದಾಳಿಯಲ್ಲಿ 7 ಪಾಕಿಸ್ತಾನ ಉಗ್ರರನ್ನು ಹತ್ಯೆ ಮಾಡಲಾಗಿತ್ತು. ನಾಜಿನ್ ಜಿಲ್ಲೆಯ ಸ್ಪಿನ್ಜೈ ಪ್ರದೇಶದಲ್ಲಿ ಅಮೆರಿಕಾ ಸೇನಾ ಪಡೆಸಿದ್ದ ವಾಯುಪಡೆ ದಾಳಿಯಲ್ಲಿ 15 ಇಸಿಸ್ ಉಗ್ರರನ್ನು ಹತ್ಯೆ ಮಾಡಿದ್ದಾರೆಂದು ವರದಿಗಳು ತಿಳಿಸಿವೆ. 

ವಾಯುಪಡೆ ದಾಳಿಯಲ್ಲಿ 2 ಇಸಿಸ್ ಉಗ್ರ ಸಂಘಟನೆ ಅಡಗುತಾಣಗಳು ಸಂಪೂರ್ಣವಾಗಿ ನಾಶಗೊಂಡಿದೆ ಎಂದು ತಿಳಿದುಬಂದಿದೆ. ನಂಗಾಹಾರ್ ಪ್ರಾಂತ್ರದಲ್ಲಿರುವ ಭಯೋತ್ಪಾದಕರನ್ನು ಮಟ್ಟಹಾಕುವ ಸಲುವಾಗಿ ಇಸಿಸ್ ಉಗ್ರ ಸಂಘಟನೆಯ ವಿರುದ್ದ ಸೇನಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಅಫ್ಘಾನಿಸ್ತಾನದ ಈ ಕಾರ್ಯಾಚರಣೆಗ ಅಮೆರಿಕ ವೈಮಾನಿಕ ಬೆಂಬಲ ಒದಗಿಸುತ್ತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT