ಲಾಹೋರ್: 'ಅಮೆರಿಕದ ಪ್ರಿಯ ವ್ಯಕ್ತಿ' ಎಂದು ಕರೆದ ಪಾಕಿಸ್ತಾನ ವಿದೇಶಾ ಸಚಿವ ಖವಾಜಾ ಆಫಿಸ್ ವಿರುದ್ಧ ಮುಂಬೈ ಉಗ್ರರ ದಾಳಿ ಪ್ರಕರಣದ ಪ್ರಮುಖ ರುವಾರಿ ಹಫೀಜ್ ಸಯೀದ್ ರೂ.10 ಕೋಟಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲು ನಿರ್ಧರಿಸಿದ್ದಾರೆಂದು ಭಾನುವಾರ ತಿಳಿದುಬಂದಿದೆ.
ಪಾಕಿಸ್ತಾನದ ನೆಲದಿಂದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕೆಂದು ಒತ್ತಾಯಿಸುವ ಅಮೆರಿಕಕ್ಕೆ, 20-30 ವರ್ಷಗಳ ಹಿಂದೆ ಇದೇ ಭಯೋತ್ಪಾದಕರು ಪ್ರಿಯರಾಗಿದ್ದರು ಎಂಬ ಅರ್ಥದಲ್ಲಿ ಈ ಹಿಂದೆ ಆಸೀಫ್ ಅವರು ಹೇಳಿದ್ದರು.
ಆಸೀಫ್ ಅವರ ಈ ಹೇಳಿಕೆ ಉಗ್ರ ಹಫೀಜ್ ಸಯೀದ್ ತೀವ್ರ ಕೆಂಡಾಮಂಡಲಗೊಂಡಿದ್ದು, ಸಯೀದ್ ಪರ ವಕೀಲ ಎ.ಕೆ. ಡೋಗರ್ ಅವರು ಪಾಕಿಸ್ತಾನ ವಿದೇಶಾಂಗ ಸಚಿವರ ವಿರುದ್ಧ ನೋಟಿಸ್ ಜಾರಿ ಮಾಡಿದ್ದಾರೆಂದು ವರದಿಗಳು ತಿಳಿಸಿವೆ.
ಹಫೀಜ್ ಸಯೀದ್ ವಿರುದ್ಧ ನಮ್ಮ ದೇಶದ ವಿದೇಶಾಂಗ ಸಚಿವರು ಮಾತನಾಡಿರುವುದನ್ನು ಕೇಳಿ ಬಹಳ ಆಘಾತವಾಯಿತು. ವಿದೇಶಾಂಗ ಸಚಿವರ ನಿಂದನಾತ್ಮಕ ಭಾಷೆಯನ್ನು ಬಳಕೆ ಮಾಡಿದ್ದಾರೆ. ಹಫೀಜ್ ಪ್ರವಾದಿಗಳ ಆಜ್ಞೆಗಳನ್ನು ಅನುಸರಿಸುವ ದೇಶಭಕ್ತಿಯುಳ್ಳ ಇಸ್ಲಾಮ ಧರ್ಮದ ಪ್ರೀತಿಯುತ ಮುಸ್ಲಿಂ ವ್ಯಕ್ತಿಯಾಗಿದ್ದಾರೆ. ಆಸೀಫ್ ಅವರ ಹೇಳಿಕೆಯಿಂದ ಮಾನನಷ್ಟವಾಗಿದ್ದು, ಪಾಕಿಸ್ತಾನ ದಂಡ ಸಂಹಿತೆ 500ರ ಅಡಿಯಲ್ಲಿ ಸಚಿಚವರಿಗೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬೇಕು ಎಂದು ಡೋಗರ್ ತಿಳಿಸಿದ್ದಾರೆ.