ವಿದೇಶ

ಅಮೆರಿಕ, ಇಸ್ರೇಲ್ ಉಗ್ರವಾದ ಅಹರಡುತ್ತಿವೆ: ಇರಾನ್

Srinivas Rao BV
ತೆಹ್ರಾನ್: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅಮೆರಿಕ ಹಾಗೂ ಇಸ್ರೇಲ್ ಉಗ್ರವಾದ ಹರಡುತ್ತಿದೆ ಎಂದು ಇರಾನ್ ಆರೋಪಿಸಿದೆ. 
ಅಮೆರಿಕ, ಇಸ್ರೇಲ್ ವಿರುದ್ಧ ಅಸಮಾಧಾನ ಹೊರಹಾಕಿರುವ ಇರಾನ್ ನ ರಕ್ಷಣಾ ಸಚಿವ ಅಮೀರ್ ಹಟಾಮಿ, ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ಉಗ್ರಗಾಮಿತ್ವ ಅಮೆರಿಕ, ಇಸ್ರೇಲ್ ಗೆ ಸಹಕಾರಿಯಾಗುತ್ತಿದೆ ಎಂದು ಹೇಳಿದ್ದಾರೆ. ಇಂತಹ ಅಪಾಯದ ನಡುವೆಯೂ ಇರಾನ್ ರಿಸಿಯಾ ಹಾಗೂ ಇರಾಕ್ ಗೆ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.
ಮಾಸ್ಕೋದಲ್ಲಿ ನಡೆದ ಭದ್ರತಾ ಸಮ್ಮೇಳನದ ಪಾರ್ಶ್ವದಲ್ಲಿ ಕಜಕಿಸ್ತಾನದ ಗೃಹ ಸಚಿವರೊಂದಿಗೆ ಮಾತುಕತೆ ನಡೆಸಿದ ಬಳಿಕ ಇರಾನ್ ಗೃಹ ಸಚಿವರು ಈ ಹೇಳಿಕೆ ನೀಡಿದ್ದಾರೆ.  ಕಜಕಿಸ್ತಾನದ ಗೃಹ ಸಚಿವರು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇರಾನ್, ರಷ್ಯಾ, ಟರ್ಕಿಯ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿರಿಯಾ ಬಿಕ್ಕಟ್ಟಿಗೆ ಸಹಕಾರ ನೀಡುತ್ತಿರುವುದನ್ನೂ ಶ್ಲಾಘಿಸಿದ್ದಾರೆ. 
SCROLL FOR NEXT