ವಿದೇಶ

ದಕ್ಷಿಣ ಆಫ್ರಿಕಾ: ಪೆಟ್ರೋಲ್ ಬಾಂಬ್ ಸ್ಪೋಟ, ಭಾರತೀಯ ಕುಟುಂಬದ ಐವರ ಹತ್ಯೆ

Raghavendra Adiga
ಜೊಹಾನ್ಸ್‌ಬರ್ಗ(ದಕ್ಷಿಣ ಆಫ್ರಿಕಾ): ಮನೆಯೊಂದರ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ದಾಳಿ ನಡೆದ ಪರಿನಾಮ ಮೂವರು ಮಕ್ಕಳು ಸೇರಿ ಐದು ಮಂದಿಯ ಭಾರತೀಯ ಕುಟುಂಬ ಮೃತಪಟ್ಟ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.
ಇಪ್ಪತ್ತೈದು ವರ್ಷಗಳಿಂದಲೂ ದಕ್ಷಿಣ ಆಫ್ರಿಕಾದಲ್ಲಿ ವಾಸವಿದ್ದ ಅಜೀಜ್‌ ಮಾಂಜ್ರಾ (45) ಮತ್ತು ಅವರ ಪತ್ನಿ ಗೋರಿ ಬೀಬಿ, ಆಕೆಯ ಮಕ್ಕಳಾದ  ಝುಬಿನಾ (18), ಮೈರೂನ್ನೀಸಾ (14) ಹಾಗೂ ಹಮ್ಮದ್‌ ರಿಜ್ವಾನ್‌ (10) ಸಾವನ್ನಪ್ಪಿದ ದುರ್ದೈವಿಗಳು.
15 ದಿನಗಳ ಹಿಂದೆ ತಮ್ಮ ಸ್ವಂತ ಮನೆಗೆ ಸ್ಥಳಾಂತರಗೊಂಡಿದ್ದ ಕುಟುಂಬ ಬಾಂಬ್ ದಾಳಿಗೀಡಾಗಿರುವುದು ಅವರ ಸ್ನೇಹಿತರ ವಲಯಕ್ಕೆ ಬಾರೀ ಆಘಾತ ತಂದಿದೆ.
ಅಂಗಡಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಲಿದ್ದ ಅಜೀಜ್‌ ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ಸ್ವಂತ ಮನೆ ಕತ್ಟಿಸಿದ್ದರು.
ಗುರುವಾರ ಮುಂಜಾನೆ ಈ ಘಟನೆ ಬೆಳಕಿಗೆ ಬಂದಿದ್ದು "ಮುಂಜಾನೆ 2ರ ವೇಳೆಗೆ ಮನೆಯ ಚಾವಣಿ ಮೇಲೆ ಯಾರೋ ನಡೆದಾಡಿದ ಸದ್ದು ಕೇಳಿಸಿತ್ತು. ಅದಾದ ಸ್ವಲ್ಪದರಲ್ಲಿ ವ್ಯಕ್ತಿಯೊಬ್ಬರು ’ಅಲ್ಲಾಹ್’ ಎಂದು ಕೂಗಿಕೊಂಡದು ಕೇಳಿದೆ. ಅದಾದ ತುಸು ಹೊತ್ತಿನಲ್ಲೇ ಮನೆಯವರು ಕಿರುಚಿಕೊಂಡ ಸದ್ದೂ ಕೇಳಿದೆ. ಆದರೆ ನನಗೆ ಭಯವಾಗಿದ್ದು ನಾನು ಅದೇನೆಂದು ನೋಡಲು ಹೋಗಿರಲಿಲ್ಲ"  ಬಾಂಬ್ ದಾಳಿ ನಡೆದ ನೆರೆಮನೆಯ ನಿವಾಸಿ  'ದಿ ಮರ್ಕ್ಯುರಿ' ಪತ್ರಿಕೆಗೆ ತಿಳಿಸಿದ್ದಾರೆ.
"ನಾನು ನನ್ನ ಮಿತ್ರರೊಬ್ಬರ ಮನೆಗೆ ಕರೆ ಮಾಡಿ ಈ ವಿಚಾರವನ್ನು ತಿಳಿಸಿದ್ದೆ. ಅವರು ಅಗ್ನಿಶಾಮಕ ದಳ ಹಾಗೂ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ" ಅವರು ಹೇಳಿದರು.
ಆದರೆ ಅಗ್ನಿಶಾಮಕ ದಳದವರು ಬರುವ ವೇಳೆ ಗೆ ಮನೆಯ ಬಹುಭಾಗ ಬೆಂಕಿಗಾಹಿತಿಯಾಗಿತ್ತು.ಅಲ್ಲದೆ ಅಗ್ನಿಶಾಮಕದವರು ಬ್ಲೇಡ್ ಗಳನ್ನು ಬಳಸಿ ಕಬ್ಬಿಣದ ಕಿಟಕಿ, ಬಾಗಿಲನ್ನು ತೆರೆಯುವ ವೇಳೆಗಾಗಲೇ ಮನೆಯಲ್ಲಿದ್ದವರೆಲ್ಲಾ ಹೊಗೆಯಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದರು ಎನ್ನಲಾಗಿದೆ.
ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಐವರ ಹತ್ಯೆ ಹಾಗೂ ಬೆಂಕಿ ಹಚ್ಚಿದ ಸಂಬಂಧ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
SCROLL FOR NEXT