ವಿದೇಶ

ಲಂಡನ್'ನಲ್ಲಿ ಭಾರತದ ತ್ರಿವರ್ಣ ಧ್ವಜ ಸುಟ್ಟು ಹಾಕಿದ ಪಾಕ್ ಬೆಂಬಲಿತ ಖಲೀಸ್ತಾನಿಗಳು!

Manjula VN
ಲಂಡನ್; ಪಾಕಿಸ್ತಾನ ಬೆಂಬಲಿ ಖಲೀಸ್ತಾನಿಗಳು ಭಾರತದ ತ್ರಿವರ್ಣ ಧ್ವಜವನ್ನು ಸುಟ್ಟು ಹಾಕಿರುವ ಘಟನೆ ಲಂಡನ್ ನಲ್ಲಿ ನಡೆದಿದೆ.
ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧವಾಗಿ ಮತ್ತು ಪರವಾಗಿ ಇಲ್ಲಿನ ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದವು. ಪ್ರತಿಭಟನಾ ಸಂದರ್ಭದಲ್ಲಿ ಪಾಕ್ ಬೆಂಬಲಿತ ಖಲೀಸ್ತಾನಿಘಲು ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿದ್ದ ಭಾರತದ ತ್ರಿವರ್ಣ ಧ್ವಜಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. 
ಪಾರ್ಲಿಮೆಂಟ್ ಸ್ಕ್ವೇರ್ ಮೇಲೆ ಹಾರಾಡುತ್ತಿದ್ದ ಭಾರತೀಯ ತ್ರಿವರ್ಣ ಧ್ವಜವನ್ನು ಕೆಳಗಿರಿಸುವ ಪಾಕ್ ಹಾಗೂ ಖಲೀಸ್ತಾನದ ಕೆಲ ಪ್ರತಿನಿಧಿಗಳು ಅದನ್ನು ಸುಟ್ಟು ಹಾಕಿದ್ದಾರೆ. ಭಾರತದ ಧ್ವಜವನ್ನು ಕೆಳಗಿಳಿಸಿದ ಬಳಿಕ ಅದೇ ಜಾಗದಲ್ಲಿ ಪಾಕ್ ಧ್ವಜನ್ನು ಹಾರಿಸಿದ್ದಾರೆಂದು ತಿಳಿದುಬಂದಿದೆ. 
ಭಾರತದಲ್ಲಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳನ್ನು ಖಂಡಿಸುವ ಉದ್ದೇಶದಿಂದ ಕೆಲ ಸಂಘಟನೆಗಳು ಪ್ರಧಾನಿ ಮೋದಿ ಎದುರು ಪ್ರತಿಭಟನೆ ದಾಖಲಿಸಲು ಇಲ್ಲಿ ಸೇರಿದ್ದರು. 
ಕೆಲವು ಪ್ರತ್ಯೇಕ ಖಲಿಸ್ತಾನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಕಾಶ್ಮೀರ ಪ್ರತ್ಯೇಕತಾವಾದಿಗಳು ಪ್ರತಿಭಟನೆ ನಡೆಸಿದರು. ಪ್ರಧಾನಿ ಮೋದಿ ಉಗ್ರ, ಮೋದಿ ನಿಮ್ಮ ಕೈಗೆ ರಕ್ತ ಅಂಟಿಕೊಂಡಿದೆ, ಇಲ್ಲಿಂಗ ಹೋಗಿ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಸ್ಥಳದಲ್ಲಿಯೇ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರಿದ್ದರೂ ಧ್ವಜಕ್ಕೆ ಬೆಂಕಿ ಹಚ್ಚುತ್ತಿರುವುದನ್ನು ತಡೆದಿಲ್ಲ. 
ಇದರಂತೆ ಪ್ರಧಾನಿ ಮೋದಿ ಪರವಾಗಿ ಕೆಲವರು ಮೆರವಣಿಗೆಗಳನ್ನು ನಡೆಸಿದ್ದಾರೆ. ಮೋದಿ ಅವರ ಚಿತ್ರಗಳಿದ್ದ ಫಲಕಗಳನ್ನು ಹಿಡಿದು, ಪ್ರಧಾನಿಗೆ ಸ್ವಾಗತ, ಜೈ ಹಿಂದ್ ಎಂದು ಘೋಷಣೆಗಳನ್ನು ಕೂಗಿದ್ದಾರೆ. 
SCROLL FOR NEXT