ನರೇಂದ್ರ ಮೋದಿ-ಕ್ಸೀ ಜಿನ್ಪಿಂಗ್
ವುಹಾನ್: ಚೀನಾ ಅಧ್ಯಕ್ಷರು ಭಾರತೀಯ ಸಿನಿಮಾಗಳನ್ನು ಇಷ್ಟಪಡುತ್ತಾರೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಜಯ್ ಗೋಖಲೆ ಹೇಳಿದ್ದಾರೆ.
ಕ್ಸೀ ಜಿನ್ಪಿಂಗ್ ಬಾಲಿವುಡ್ ಸೇರಿದಂತೆ ಭಾರತದ ಅನೇಕ ಪ್ರಾದೇಶಿಕ ಸಿನಿಮಾಗಳನ್ನು ವೀಕ್ಷಿಸಿದ್ದು, ಚೀನಾದಲ್ಲಿ ಭಾರತೀಯ ಸಿನಿಮಾವನ್ನು ಪ್ರೋತ್ಸಾಹಿಸುವುದಾಗಿಯೂ ಭರವಸೆ ನೀಡಿದ್ದಾರೆ ಎಂದು ವಿಜಯ್ ಗೋಖಲೆ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ-ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ದ್ವಿಪಕ್ಷೀಯ ಮಾತುಕತೆ ವೇಳೆ ಸಿನಿಮಾ ರಂಗವೂ ಸೇರಿದಂತೆ ಮನರಂಜನೆಯ ಕ್ಷೇತ್ರಗಳಲ್ಲಿ ಚೀನಾ- ಭಾರತದ ಸಹಯೋಗವನ್ನೂ ಮೋದಿ- ಕ್ಸೀ ಜಿನ್ಪಿಂಗ್ ಚರ್ಚಿಸಿದ್ದಾರೆ ಎಂದು ವಿಜಯ್ ಗೋಖಲೆ ಮಾಹಿತಿ ನೀಡಿದ್ದಾರೆ.
ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಮೀರ್ ಖಾನ್ ಅವರನ್ನು ಚೀನಾ ರಾಯಭಾರಿಯನ್ನಾಗಿಸುವುದರ ಕುರಿತು ವರ್ದಿಗಳು ಪ್ರಕಟವಾದ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದ್ದು, " ಭಾರತದ ಖ್ಯಾತ ನಟ ಅಮೀರ್ ಖಾನ್ ಅವರು ಚೀನಾದಲ್ಲಿಯೂ ಜನಪ್ರಿಯ ನಟ, ಅವರ ದಂಗಲ್ ಸಿನಿಮಾವನ್ನು ನಾನೂ ಸೇರಿದಂತೆ ಹಲವು ಚೀನಿಯರು ವೀಕ್ಷಿಸಿದ್ದೇವೆ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ಹುವಾ ಚುನೈಯಿಂಗ್ ಹೇಳಿದ್ದರು.