ಸಾಂದರ್ಭಿಕ ಚಿತ್ರ 
ವಿದೇಶ

ರೆಸ್ಟೋರೆಂಟ್ ನಲ್ಲಿ ಸ್ತನ್ಯಪಾನ ಮಾಡಿಸುತ್ತಿದ್ದ ಮಹಿಳೆ ಫೋಟೋ ವೈರಲ್! ಲಕ್ಷಕ್ಕೂ ಅಧಿಕ ಶೇರ್

ಮೆಲಾನಿ ಡೂಡ್ಲೇ ಎಂಬವರು ತನ್ನ ಮಗುವಿಗೆ ರೆಸ್ಟೋರೆಂಟ್​ವೊಂದರಲ್ಲಿ ಕುಳಿತು ಸ್ತನ್ಯಪಾನ ಮಾಡುತ್ತಿದ್ದರು. ಈ ವೇಳೆ ದಾರಿಹೋಕನೊಬ್ಬ ಬಟ್ಟೆ ಮುಚ್ಚಿಕೊಳ್ಳುವಂತೆ ...

ಆಸ್ಟಿನ್: ​ಲ್ಯೂಕಾಸ್ ಎಂಬಲ್ಲಿ ಮಹಿಳೆಯೊಬ್ಬಳು ಮಗುವಿಗೆ ಎದೆ ಹಾಲು ಉಣಿಸುವ ವೇಳೆ ಮುಖಕ್ಕೆ ಬಟ್ಟೆ ಮುಚ್ಚಿಕೊಂಡ ಚಿತ್ರ ವೈರಲ್​ ಆಗಿದೆ.
ಮೆಲಾನಿ ಡೂಡ್ಲೇ ಎಂಬವರು ತನ್ನ ಮಗುವಿಗೆ ರೆಸ್ಟೋರೆಂಟ್​ವೊಂದರಲ್ಲಿ ಕುಳಿತು ಸ್ತನ್ಯಪಾನ ಮಾಡುತ್ತಿದ್ದರು. ಈ ವೇಳೆ ದಾರಿಹೋಕನೊಬ್ಬ ಬಟ್ಟೆ ಮುಚ್ಚಿಕೊಳ್ಳುವಂತೆ ಹೇಳಿದ್ದಾನೆ. ಕೂಡಲೇ ತನ್ನ ಎದೆ ಮುಚ್ಚಿಕೊಳ್ಳುವ ಬದಲು ಡೂಡ್ಲೆ ಮುಖವನ್ನೇ ಬಟ್ಟೆಯಲ್ಲಿ ಮುಚ್ಚಿಕೊಂಡಿದ್ದಾರೆ. ಈ ಚಿತ್ರವನ್ನು ಅವರ ಸ್ನೇಹಿತ ಕೆರೋಲ್​ ಲಾಕ್​ವುಡ್​ ಎಂಬವರು ಫೇಸ್​ಬುಕ್​ನಲ್ಲಿ ಶೇರ್ ಮಾಡಿದ್ದಾರೆ.
ಮಗುವಿಗೆ ಎದೆ ಹಾಲು ನೀಡುವ ಸಂದರ್ಭದಲ್ಲಿ ಕಾಣದಂತೆ ಬಟ್ಟೆಯನ್ನು ಧರಿಸಿದ್ದೆ. ಆದರೆ ಬಿಸಿಲಿನ ಬೇಗೆಯಿಂದ ನಾನು ಬಟ್ಟೆಯನ್ನು ಸರಿಸಿ ಹಾಲುಣಿಸುತ್ತಿದ್ದೆ. ಈ ವೇಳೆ ದಾರಿಹೋಕನೊಬ್ಬ ಬಟ್ಟೆಯಿಂದ ಮುಚ್ಚಿಕೊಳ್ಳುವಂತೆ ಹೇಳಿದ ಎಂದು ಡೂಡ್ಲೆ ಹೇಳಿದ್ದಾರೆ.
ಕೆಲ ಕ್ಷಣಗಳ ಕಾಲ ನನಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ, ಕೂಡಲೇ ಆ ಬಟ್ಟೆಯೊಂದರಿಂದ ನನ್ನ ಮುಖವನ್ನೇ ಮುಚ್ಚಿಕೊಂಡೆ ಎಂದು ಡೂಡ್ಲೇ ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ಮೇಲೆ ಯುದ್ಧ ಇನ್ನು 2-3 ವಾರಗಳಲ್ಲಿ ಕೊನೆಯಾಗಬಹುದು': ಡೊನಾಲ್ಡ್ ಟ್ರಂಪ್

ಗಾಯದ ಮೇಲೆ ಬರೆ: ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಹೆಚ್ಚಳ: ಹೊಸ ದರ ಇಂದಿನಿಂದಲೇ ಜಾರಿ

ರಷ್ಯಾದ ಸೈನಿಕ ಸಾರಿಗೆ ವಿಮಾನ ಕ್ರೈಮಿಯಾದಲ್ಲಿ ಪತನ: 29 ಮಂದಿ ಸಾವು

ಇರಾನ್ ನಾಯಕರ 'ಹತ್ಯೆಗೆ ಪ್ರತೀಕಾರ': ಆಪಲ್, ಗೂಗಲ್ ಸೇರಿ 18 ಅಮೆರಿಕ ಕಂಪನಿಗಳ ಮೇಲೆ ದಾಳಿ; IRGC ಪ್ರತಿಜ್ಞೆ

"ಬನ್ನಿ, ನಾವು ಕಾಯುತ್ತಿದ್ದೇವೆ": ಅಮೆರಿಕ ಸೇನೆಗೆ ಇರಾನ್ ಸವಾಲು; Video ಬಿಡುಗಡೆ

SCROLL FOR NEXT