ವಿದೇಶ

ಇಟಲಿ: ಸೇತುವೆ ಕುಸಿತದಿಂದ 37 ಸಾವು, ದೇಶಾದ್ಯಂತ ಆಕ್ರೋಶ ಸ್ಪೋಟ

Nagaraja AB

ಜಿನಿವಾ : ಸೇತುವೆಯೊಂದು ಕುಸಿದ ಪರಿಣಾಮ ಸುಮಾರು 37 ಮಂದಿ ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.  ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ  ಚಿಕಿತ್ಸೆ ನೀಡಲಾಗುತ್ತಿದೆ.

50 ವರ್ಷ ಹಳೆಯದಾದ  ಜಿನಿವಾ ಮತ್ತು ದಕ್ಷಿಣ ಫ್ರಾನ್ಸ್   ಸಂಪರ್ಕಿಸುವ ಸೇತುವೆ ಧಾರಾಕಾರ ಮಳೆಯಿಂದಾಗಿ ಕುಸಿದಿದ್ದು, ಡಜನ್ ಗೂ ಹೆಚ್ಚು ವಾಹನಗಳು , ಒಂದು ರೈಲು ಹಾಗೂ ಎರಡು ಗೋದಾಮುಗಳು ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ನೂರಾರು ಅಗ್ನಿಸಾಮಕ ಸಿಬ್ಬಂದಿಗಳು  ಅವಶೇಷಗಳಡಿ  ಸಿಲುಕಿರುವವರಿಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

 ಈ ಮಧ್ಯೆ ಘಟನೆಯಿಂದಾಗಿ ಸಾರ್ವಜನಿಕರು ಆತಂಕಗೊಂಡಿದ್ದು,  1.2 ಕಿಮೀ ಉದ್ದದ ಸೇತುವೆ 1967ರಲ್ಲಿ ಪೂರ್ಣಗೊಂಡಿದ್ದು, ಎರಡು ವರ್ಷಗಳಿಂದಲೂ ಪರಿಶೀಲನೆ ನಡೆಸದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ  ದೇಶಾದ್ಯಂತ ಆಕ್ರೋಶ ಸ್ಪೋಟಗೊಂಡಿದೆ.

ಸೇತುವೆಯ ಖಾಸಗಿ ವಲಯ ಮ್ಯಾನೇಜರ್ ಟೋಲ್ ನಿಂದ ಬಿಲಿಯನ್ ಗಟ್ಟಲೇ ಆದಾಯ ಗಳಿಸುತ್ತಾರೆ. ಆದರೆ, ಹಣ ಖರ್ಚು ಮಾಡುವುದಿಲ್ಲ. ಇದರಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಉಪ ಪ್ರಧಾನಿ ಮತ್ತು ಒಳಾಡಳಿತ ಸಚಿವ ಮ್ಯಾಟೆವೊ ಸಾಲ್ವಿನ್ ಹೇಳಿದ್ದಾರೆ.

 ಘಟನಾ ಸ್ಥಳದಲ್ಲಿ  400 ಅಗ್ನಿಶಾಮಕ ಸಿಬ್ಬಂದಿಗಳಿದ್ದು,  ಅವಶೇಷಗಳಡಿ ಸಿಲುಕಿರುವವರನ್ನು  ರಕ್ಷಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಗ್ನಿಶಾಮಕ ದಳದ ವಕ್ತಾರ ಲೂಕಾ ಕ್ಯಾರಿ ತಿಳಿಸಿದ್ದಾರೆ.

SCROLL FOR NEXT