ಸಾಂದರ್ಭಿಕ ಚಿತ್ರ 
ವಿದೇಶ

ಶ್ರೀಲಂಕಾ : ಮನೆ, ರಸ್ತೆ ನಿರ್ಮಾಣದ ವ್ಯಾಪ್ತಿ ಹೆಚ್ಚಿಸಿದ ಚೀನಾ : ಕುಂಟುತಾ ಸಾಗಿದ ಕಾಮಗಾರಿ

ನಾಗರಿಕ ಯುದ್ದ ನಂತರ ಹಲವು ದಶಕಗಳಿಂದ ದುರಸ್ಥಿಗೊಳ್ಳದೆ ಇರುವ ಉತ್ತರ ಶ್ರೀಲಂಕಾದಲ್ಲಿ ಮನೆ, ರಸ್ತೆ ನಿರ್ಮಿಸಲು ಚೀನಾ ಮುಂದಾಗಿದ್ದು, ದಕ್ಷಿಣ ದ್ವೀಪದಾಚೆಗೆ ಅದರ ಪ್ರಭಾವಗಳನ್ನು ವಿಸ್ತರಿಸುವ ಉದ್ದೇಶ ಹೊಂದಿದೆ

ಕೊಲೊಂಬೊ :ನಾಗರಿಕ ಯುದ್ದ ನಂತರ ಹಲವು ದಶಕಗಳಿಂದ ದುರಸ್ಥಿಗೊಳ್ಳದೆ ಇರುವ  ಉತ್ತರ ಶ್ರೀಲಂಕಾದಲ್ಲಿ   ಮನೆ, ರಸ್ತೆ ನಿರ್ಮಿಸಲು ಚೀನಾ ಮುಂದಾಗಿದ್ದು,  ದಕ್ಷಿಣ  ದ್ವೀಪದಾಚೆಗೆ  ಅದರ ಪ್ರಭಾವಗಳನ್ನು ವಿಸ್ತರಿಸುವ ಉದ್ದೇಶ ಹೊಂದಿದೆ ಎಂದು ಚೀನಾ ಮತ್ತು ಶ್ರೀಲಂಕಾದ  ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರ ಮತ್ತು ತಮಿಳು ಪ್ರತ್ಯೇಕತಾವಾದಿಗಳ ನಡುವಿನ 26 ವರ್ಷಗಳ ಕದನ 2009 ರಲ್ಲಿ ಅಂತ್ಯಗೊಂಡಿದ್ದು, ಶ್ರೀಲಂಕಾದ ಉತ್ತರ ಹಾಗೂ ಪಶ್ಚಿಮ ಭಾಗದಲ್ಲಿ   ಕಟ್ಟಡ ನಿರ್ಮಿಸಲು  ಚೀನಾಕ್ಕೆ ನೆರವು ಬೇಕಿದೆ ಎಂದು  ಕೊಲೊಂಬೊದಲ್ಲಿನ ಚೀನಾ ರಾಯಬಾರಿ ಲ್ಯೂ ಚೊಂಗೊ  ಹೇಳಿದ್ದಾರೆ.   

ಶ್ರೀಲಂಕಾದ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಹೆಚ್ಚಿನ ಯೋಜನೆ ಕೈಗೊಳ್ಳಲು  ಸರ್ಕಾರ ಹಾಗೂ ತಮಿಳು ಸಮುದಾಯದದಿಂದ  ಸಹಕಾರವನ್ನು ಬಯಸುವುದಾಗಿ ಅವರು ಹೇಳಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ಚೀನಾ ರೈಲ್ವೆ ಬಿಜಿಂಗ್ ಎಂಜಿನಿಯರಿಂಗ್  ಕಂಪನಿ  ಶ್ರೀಲಂಕಾದ ಉತ್ತರ ಜಿಲ್ಲೆ ಜಪ್ಪ್ ನಾದಲ್ಲಿ 40  ಸಾವಿರ ಮನೆಗಳನ್ನು ನಿರ್ಮಿಸಲು 300 ಮಿಲಿಯನ್ ಗೂ ಹೆ್ಚ್ಚು ಯೋಜನೆಗಳನ್ನು ಪಡೆದುಕೊಂಡಿತ್ತು.

 ಆದರೆ,  ಕಾಂಕ್ರಿಟ್ ಬದಲಿಗೆ ಇಟ್ಟಿಗೆ ಮನೆ ಬೇಕೆಂದು ನಿವಾಸಿಗಳು ಆಗ್ರಹಿಸಿದ್ದರಿಂದ ಯೋಜನೆ ಸ್ಥಗಿತಗೊಂಡಿತ್ತು. ಇದು  ಭಾರತದೊಂದಿಗೆ ಮುಕ್ತ ಮಾತುಕತೆಗೆ ಅವಕಾಶ ಮಾಡಿಕೊಟ್ಟಿತ್ತು ಎಂದು  ತಮಿಳು ರಾಷ್ಟ್ರೀಯ ಒಕ್ಕೂಟದ ಶಾಸಕಿ ಎಂ. ಎ. ಸುಮತ್ರಿಯನ್ ಹೇಳುತ್ತಾರೆ.

ಶ್ರೀಲಂಕಾದ ಅನುದಾನದಿಂದ  ಭಾರತ ಈಗಾಗಲೇ 44 ಸಾವಿರ ಮನೆಗಳನ್ನು ಉತ್ತರ ಭಾಗದಲ್ಲಿ ಪೂರ್ಣಗೊಳಿಸಿದೆ.  ಅಲ್ಲದೇ ಪಲಾಲಿ ವಿಮಾನ ನಿಲ್ದಾಣ ಮತ್ತು ಕಂಕೇಸಂತುರೈ ಬಳಿ ಮರು ನಿರ್ಮಾಣ ಮಾಡಲು ಚಿಂತನೆ ನಡೆಸಿದೆ.

ಭಾರತಕ್ಕಿಂತ ಕಡಿಮೆ ದರದಲ್ಲಿ ಚೀನಾ ಮನೆ, ರಸ್ತೆ, ನಿರ್ಮಾಣ ಮಾಡಲಿದೆ ಎಂದು ಹೇಳುತ್ತಿದೆ ಎಂದು  ಶ್ರೀಲಂಕಾದ  ಇಬ್ಬರು ಹಿರಿಯ ಸಚಿವರು ಹೇಳಿದ್ದಾರೆ. ರಸ್ತೆ ಸಂಪರ್ಕ, ನೀರು ಪೂರೈಕೆ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದಾಗಿ ಚೀನಾ  ಹೇಳಿದೆ  ಎಂದು ಅವರು ತಿಳಿಸಿದ್ದಾರೆ

ಶ್ರೀಲಂಕಾ ತಮಿಳರೊಂದಿಗೆ ಸಾಂಸ್ಕೃತಿಕ ಮತ್ತು ಮೌಲ್ಯಗಳ ಮೂಲಕ ಭಾರತ ಉತ್ತಮ ಸಂಬಂಧ ಹೊಂದಿದೆ. ಆದರೆ. ಏಷ್ಯಾದಾದ್ಯಂತ ಸ್ನೇಹಮಯ ಬಂದರು  ನಿರ್ಮಿಸುವ ಕಾರ್ಯತಂತ್ರದೊಂದಿಗೆ   ಇತ್ತೀಚಿಗೆ ಚೀನಾ ಈ ದ್ವೀಪ ಪ್ರದೇಶದಲ್ಲಿ ಬಂದರು ನಿರ್ಮಾಣ, ವಿದ್ಯುತ್ ಘಟಕ, ಹೆದ್ದಾರಿ ನಿರ್ಮಾಣ ಮಾಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!