ವಿದೇಶ

ಕೇರಳ ಪ್ರವಾಹ: ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ 175 ಟನ್ ಪರಿಹಾರ ಸಾಮಗ್ರಿ ಪೂರೈಕೆ

Sumana Upadhyaya

ದುಬೈ (ಯುನೈಟೆಡ್ ಅರಬ್ ಎಮಿರೇಟ್ಸ್): ಪ್ರವಾಹ ಪೀಡಿತ ಕೇರಳ ರಾಜ್ಯದ ಜನತೆಗೆ ಸಹಾಯವಾಗಲು 175 ಟನ್ ಗೂ ಅಧಿಕ ಸಾಮಗ್ರಿಗಳನ್ನು ದುಬೈ ಮೂಲದ ಎಮಿರೇಟ್ಸ್ ಸ್ಕೈಕಾರ್ಗೊ ವಿಮಾನ ಹೊತ್ತು ತರಲಿದೆ.

ಇದಕ್ಕಾಗಿ ವಿಮಾನಯಾನ ಕಂಪೆನಿ 12ಕ್ಕೂ ಅಧಿಕ ವಿಮಾನಗಳನ್ನು ಕಳುಹಿಸಲಿದೆ. ಅಲ್ಲಿನ ಅನೇಕ ಸಂಘ ಸಂಸ್ಥೆಗಳು ಮತ್ತು ಯುಎಇ ಮೂಲದ ವ್ಯಾಪಾರಿಗಳು ಕೊಡುಗೆಯಾಗಿ ನೀಡಿರುವ ಸಾಮಗ್ರಿಗಳನ್ನು ಹೊತ್ತು ತರಲಾಗುತ್ತಿದೆ.

ಬ್ಲಾಂಕೆಟ್ ಗಳು, ಜೀವರಕ್ಷಕ ದೋಣಿಗಳು ಮತ್ತು ಒಣ ಆಹಾರ ಪದಾರ್ಥಗಳನ್ನು ಯುಎಇ ಎಮಿರೇಟ್ಸ್ ಸ್ಕೈಕಾರ್ಗೊ ಮೂಲಕ ಸಾಗಿಸುತ್ತಿದೆ.

ಯುಎಇಯ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಕೇಳಿಬರುತ್ತಿತ್ತು. ಈ ಸಂದರ್ಭದಲ್ಲಿ ಆಹಾರ ಮತ್ತು ಇತರೆ ವಸ್ತುಗಳು ಅಲ್ಲಿಂದ ಬರುತ್ತಿವೆ.

SCROLL FOR NEXT