ವಿದೇಶ

ಪ್ರಧಾನಿ ಮೋದಿಗೆ ಫಿಫಾ ಅಧ್ಯಕ್ಷರಿಂದ ವಿಶೇಷ ಫುಟ್ಬಾಲ್ ಜರ್ಸಿ ಉಡುಗೊರೆ!

Raghavendra Adiga
ಬ್ಯೂನೆಸ್ ಐರಿಸ್: ಭಾರತ ಕಳೆದ ವರ್ಷ ಭಾರತದಲ್ಲಿ ನಡೆದ ಫೀಫಾ U-17 ವಿಶ್ವಕಪ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ನಂತರ ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವುದನ್ನು ತಪ್ಪಿಸಿಕೊಂಡಿದ್ದರು. ಆದರೆ ಈಗ ಅರ್ಜೆಂಟೈನಾದಲ್ಲಿ ನಡೆಯುತ್ತಿರುವ  2018ರ ಜಿ20 ಶೃಂಗಸಭೆ ಸಂದರ್ಭ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ. ಅಲ್ಲದೆ  ನರೇಂದ್ರ ಮೋದಿ ಅವರಿಗೆ ವಿಶೇಷ ಫುಟ್ಬಾಲ್ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ವಿಶೇಷ ಜೆರ್ಸಿಯಲ್ಲಿ ಜಿ20 ಎಂದು ಬರೆಯಲಾಗಿದೆ ಅಲ್ಲದೆ ಮೋದಿ ಎಂದೂ ಸಹ ಮುದ್ರಿಸಲಾಗಿದೆ.
ಈ ಕುರಿತಂತೆ ಪ್ರಧಾನಿ ಮೋದಿ ತಮ್ಮ ಟ್ವಿತ್ಟರ್ ನಲ್ಲಿ ಚಿತ್ರ ಸಹಿತ ಸಂದೇಶ ಬರೆದು ಗಿಯಾನಿ ಅವರಿಗೆ ಧನ್ಯವಾದ ಹೇಳಿದ್ದಾರೆ."ಫುಟ್ಬಾಲ್ ಬಗ್ಗೆ ಯೋಚಿಸದೆ ಅರ್ಜೆಂಟೈನಾಗೆ ಆಗಮಿಸುವುದು ಅಸಾಧ್ಯ. ಭಾರತದಲ್ಲಿ ಅರ್ಜೆಂಟೈನಾ ಆಟಗಾರರುಸಾಕಷ್ಟು ಜನಪ್ರಿಯರಾಗಿದ್ದಾರೆ. ಇಂದು ಣಾನು ಫಿಫಾ ಅಧ್ಯಕ್ಷ ಗಿಯಾನಿ ಅವರಿಂದ ಫುಟ್ಬಾಲ್ ಜರ್ಸಿಯನ್ನು ಉಡುಗೊರೆಯಾಗಿ ಪಡೆದಿದ್ದೇನೆ.ಈ ಗೌರವಕ್ಕಾಗಿ ನಾನು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ" ಮೋದಿ ಟ್ವೀಟ್ ಮಾಡಿದ್ದಾರೆ.
ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮೋದಿ ಯೋಗ ಹಾಗೂ ಶಾಂತಿ ಎಂಬ ಕುರಿತು ಮಾತನಾಡಿದ್ದರು. ಈ ವೇಳೆ ಅರ್ಜೆಂಟೈನಾ ಹಾಗೂ ಫುಟ್ಬಾಲ್ ಕುರಿತು ಸಹ ಅವರು ವರ್ಣಿಸಿದ್ದರು. ಈ ವರ್ಣನೆಯು ಫಿಫಾ ಅಧ್ಯಕ್ಷರ ಮೇಲೆ ಪರಿಣಾಮ ಬೀರಿದ್ದು ಅವರು ಮೋದಿಯವರಿಗೆ ಈ ವಿಶೇಷ ಉಡುಗೊರೆ ನೀಡಿದ್ದಾರೆ ಎನ್ನಲಾಗಿದೆ.
ಇದೇ ವೇಳೆ 2022ರಲ್ಲಿ ಭಾರತವು ಜಿ20  ಶೃಂಗಸಭೆಗೆ ಆತಿಥ್ಯ ವಹಿಸಲಿದೆ. ಈ ವರ್ಷ ಭಾರತ ಸ್ವಾತಂತ್ರ ಪಡೆದು 75 ವರ್ಷಗಳು ಪೂರ್ಣಗೊಳ್ಳಲಿದೆ.
"ನಾನು 2022ರಲ್ಲಿ ಭಾರತಕ್ಕೆ ಬರುವಂತೆ ವಿಶ್ವದಾದ್ಯಂತದ ಉನ್ನತ ನಾಯಕರನ್ನು ಆಹ್ವಾನಿಸುತ್ತೇನೆ" ಮೋದಿ ಹೇಳಿದ್ದಾರೆ.
SCROLL FOR NEXT