ವಿದೇಶ

ಕಾಬುಲ್'ನಲ್ಲಿ ಆತ್ಮಾಹುತಿ ದಾಳಿ: 43 ಮಂದಿ ಸಾವು, ಹಲವರಿಗೆ ಗಾಯ

Manjula VN
ಕಾಬುಲ್: ಅಫ್ಘಾನಿಸ್ತಾನ ರಾಜಧಾನಿ ಕಾಬುಲ್'ನಲ್ಲಿರುವ ಸರ್ಕಾರಿ ಕಚೇರಿ ಬಳಿ ಆತ್ಮಾಹುತಿ ದಾಳಿ ನಡೆಸಿದ್ದು, ಘಟನೆಯಲ್ಲಿ 43 ಮಂದಿ ಸಾವನ್ನಪ್ಪಿ, ಹಲವರಿಗೆ ಗಾಯವಾಗಿರುವ ಘಟನೆ ಸೋಮವಾರ ನಡೆದಿದೆ. 
ಅಫ್ಘಾನಿಸ್ತಾನದಲ್ಲಿರುವ ಅಮೆರಿಕಾದ ಸೇನೆಯ ಗಾತ್ರ ಕಡಿತಗೊಳಿಸುವ ಸಂಬಂಧ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸಿರುವ  ಬಗ್ಗೆ ಅಫ್ಘಾನ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಆತ್ಮಾಹುತಿ ದಾಳಿ ನಡೆದಿದೆ. 
ಅಮೆರಿಕಾದ ಸೇನಾ ಕಡಿತ ಕ್ರಮ, ತಾಲಿಬಾನ್ ಜೊತೆಗಿನ 17 ವರ್ಷಗಳ ಯುದ್ಧ ಕೊನೆಗೊಳಿಸುವ ಪ್ರಯತ್ನದ ಮೇಲೆ ಈ ದಾಳಿ ಗಂಭೀರ ಪರಿಣಾಮ ಬೀರಲಿದೆ ಎಂದು ಆಫ್ಧಾನಿಸ್ತಾನ ಆತಂಕ ವ್ಯಕ್ತಪಡಿಸಿದೆ. 
ಸರ್ಕಾರಿ ಕಟ್ಟಣದ ಆವರಣದಲ್ಲಿ ನಡೆದ ಈ ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ. ಘಟನೆಯಲ್ಲಿ 43 ಜನರು ಸಾವನ್ನಪ್ಪಿದ್ದು, ಹಲವಾರಿಗೆ ಗಂಭೀರ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ದಾಳಿ ನಡೆದ ಸ್ಥಳಕ್ಕೆ ಅಫ್ಘಾನಿಸ್ತಾನದ ಪಡೆಗಳು ಧಾವಿಸಿದ್ದು, ಕಾರ್ಯಾಚರಣೆ ನಡೆಸಿ ಮೂವರು ದಾಳಿಕೋರರನ್ನು ಹತ್ಯೆ ಮಾಡಿದ್ದಾರೆ. ಅಲ್ಲದೆ, 350ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಿದ್ದಾರೆ. 
SCROLL FOR NEXT