ವಿದೇಶ

ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ಪ್ರಸ್ತಾಪಿಸಿದ ಪಾಕ್; 1948ರ ಒಪ್ಪಂದ ಮರುಪರಿಶೀಲನೆಗೆ ಒತ್ತಾಯ

Raghavendra Adiga
ಯುನೈಟೆಡ್ ನೇಷನ್ಸ್: ಕಾಶ್ಮೀರ ಸಮಸ್ಯೆಯ ವಿಚಾರವನ್ನು ಪಾಕಿಸ್ತಾನವು ಭದ್ರತಾ ಮಂಡಳಿ ಎದುರು ಪ್ರಸ್ತಾಪಿಸಿದ್ದು ಒಪ್ಪಂದಗಳ ಅನುಷ್ಟಾನವು ಸರಿಯಾದ ಕ್ರೆಅಮದಲ್ಲಿ ಆಗಿಲ್ಲವೆಂದು ಆರೋಪಿಸಿದೆ. ನಿರ್ಣಯಗಳ ಅನುಷ್ಟಾನಗಳಾಗದೆ ಹೋದಲ್ಲಿ ಮಂಡಳಿಯ ಮೇಲಿನ ವಿಶ್ವಾಸಾರ್ಹತೆಗೆ ಭಂಗವಾಗುತ್ತದೆ ಎಂದು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಖಾಯಂ ಪ್ರತಿನಿಧಿಯಾಗಿರುವ ಮಲೀಹಾ ಲೋಧಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರದಂತಹಾ ಸುದೀರ್ಘ ಕಾಲದ ವಿವಾದಗಳನ್ನು ಬಗೆಹರಿಸುವ ಸಂಬಂಧ ಮಂಡಳಿ ತನ್ನ ನಿರ್ಣಯಗಳ ಅನುಷ್ಟಾನದ ಕುರಿತು ಪರಿಶೀಲನೆ ನಡೆಸಬೇಕು ಎಂದು ಲೋಧಿ ಹೇಳಿದ್ದಾರೆ. ಹಾಗೊಂದು ವೇಳೆ ಮಂಡಳಿ ತನ್ನ ನಿರ್ಣಯಗಳನ್ನು ಕಾರ್ಯಗತ ಗೊಳಿಸುವುದರಲ್ಲಿ ವಿಫಲವಾದರೆ ಭದ್ರತಾ ಮಂಡಳಿ ಮಾತ್ರವಲ್ಲ ಜಾಗತಿಕವಾಗಿ ವಿಶ್ವಸಂಸ್ಥೆಯ ಗೌರವಕ್ಕೂ ಕುಂದುಂಟಾಗುತ್ತದೆ.
1948ರ ಒಪ್ಪಂದವನ್ನು ಉಲ್ಲೇಖಿಸದ್ದ ಲೋಧಿ ಕಾಶ್ಮೀರದ ಭವಿಷ್ಯದ ದೃಷ್ಟಿಯಿಂದ ಜನಾಭಿಪ್ರಾಯ ಸಂಗ್ರಹ ಮಾಡುವುದು ಸೂಕ್ತವಾಗಿದೆ. ಹಾಗೆಯೇ ಕಾಶ್ಮೀರ ಪ್ರವೇಶಿಸ್ರುವ ಪಾಕಿಸ್ತಾನ ಬುಡಕಟ್ಟು ಜನರನ್ನು ವಾಪಾಸ್ ಕರೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಆದರೆ ಭಾರತವು ಪಾಕಿಸ್ತಾನ ಹೇಳುವ ಬುಡಕಟ್ಟು ಜನಾಂಗ ಎಂದರೆ ಕಾಶ್ಮೀರಕ್ಕೆ ನುಸುಳಿರುವ ಪಾಕಿಸ್ತಾನ ಪಡೆಗಳಾಗಿದ್ದಾರೆ ಎಂದಿದೆ. ಕಾಶ್ಮೀರದಲ್ಲಿನ ತನ್ನ ಸೇನೆಯನ್ನು ಪಾಕಿಸ್ತಾನ ಹಿಂಪಡೆದುಕೊಳ್ಳದ ಹೊರತು ಭಾರತ ಜನಾಭಿಪ್ರಾಯ ಸಾಬೀತು ಪಡಿಸಲು ಸಾಧ್ಯವಿಲ್ಲ. ಆದರೆ ಕಾಶ್ಮೀರ ಜನರು ಭಾರತ ಪ್ರಜಾಪ್ರಭುತ್ವಕ್ಕೆ ಗೌರವ ನೀಡುತ್ತಾರೆ. ತಾವು ಹೆಮ್ಮೆಯ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿರುವುದನ್ನು ಅವರು ಚುನಾವಣೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಸಾಬೀತು ಪಡಿಸಿದ್ದಾರೆ ಎಂಡು ಭಾರತ ಹೇಳಿದೆ.
SCROLL FOR NEXT