ವಾಷಿಂಗ್ಟನ್: ಲೇಖಾನುದಾನಕ್ಕೆ ಅಮೆರಿಕ ಕಾಂಗ್ರೆಸ್ ಶುಕ್ರವಾರ ಅನುಮೋದನೆ ನೀಡಿದ್ದು, ಇದರೊಂದಿಗೆ ವಿಶ್ವದ ದೊಡ್ಡಣ್ಣ ಡೊನಾಲ್ಡ್ ಟ್ರಂಪ್ ಸರ್ಕಾರ ಹಣಕಾಸಿನ ಬಿಕ್ಕಟ್ಟಿನಿಂದ ಪಾರಾಗಿದೆ.
ಇಂದು ಮಿಲಿಟರಿ ಮತ್ತು ದೇಶಿಯ ಕಾರ್ಯಕ್ರಮಗಳಿಗೆ ಅನುದಾನ ಕೊರತೆಯಾಗದಂತೆ ನೋಡಿಕೊಳ್ಳಲು ಅಮೆರಿಕದ ಮೇಲ್ಮನೆ ಸೆನೆಟ್ನಲ್ಲಿ ಆಡಳಿತಾರೂಢ ರಿಪ್ಲಬಿಕನ್ ಮತ್ತು ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷಗಳ ನಡುವೆ ಎರಡು ವರ್ಷಗಳ ಅವಧಿಯ ಲೇಖಾನುದಾನಕ್ಕೆ ಒಪ್ಪಂದ ಏರ್ಪಟ್ಟ ಬಳಿಕ ಲೇಖಾನುದಾನಕ್ಕೆ ಅಮೆರಿಕ ಸೆನೆಟ್ ಒಪ್ಪಿಗೆ ನೀಡಿದ್ದು, ಅದನ್ನು ಅಧ್ಯಕ್ಷರ ಸಹಿಗಾಗಿ ಶ್ವೇತ ಭವನಕ್ಕೆ ರವಾನಿಸಲಾಗಿದೆ
ಈ ಒಪ್ಪಂದದನ್ವಯ ಮಿಲಿಟರಿ ಮತ್ತು ದೇಶಿಯ ಕಾರ್ಯಕ್ರಮಗಳಿಗಾಗಿ 19.3 ಲಕ್ಷ ಕೋಟಿ ರೂ. ಅನುದಾನ ಬಳಕೆಗೆ ಸೆನೆಟ್ನ ಅನುಮೋದನೆ ದೊರೆತಂತಾಗಿದೆ.
ಕಳೆದ ಜನವರಿ 20ರಂದು ಅಲ್ಪಾವಧಿಯ ಖರ್ಚುವೆಚ್ಚಗಳ ಲೇಖಾನುದಾನಕ್ಕೆ ಸೆನೆಟ್ನಲ್ಲಿ ಅನುಮೋದನೆ ನೀಡಲು ಡೆಮಾಕ್ರಾಟ್ ಪಕ್ಷದ ನಾಯಕರು ನಿರಾಕರಿಸಿದ್ದರಿಂದ, ಅಮೆರಿಕದಲ್ಲಿ ಆಡಳಿತ ಯಂತ್ರ ಸ್ಥಗಿತಗೊಂಡಿತ್ತು.
ಹಣಕಾಸು ಪೂರೈಸಲು ಅಮೆರಿಕಾ ಕಾಂಗ್ರೆಸ್ ವಿಫಲವಾದರೆ ಸರ್ಕಾರದ ಸಂಸ್ಥೆಗಳು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸುವ ಅವಕಾಶ ಒಕ್ಕೂಟ ಕಾನೂನಿನಲ್ಲಿದೆ.