ಅಬುಧಾಬಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಬುಧಾಬಿಗೆ ಭೇಟಿ ನೀಡಿರುವ ನಡುವೆಯೇ ಮುಸ್ಲಿಂ ರಾಷ್ಟ್ರದ ಶೇಖ್ ಸುಲ್ತಾನ್ 'ಜೈ ಸೀತಾ ರಾಮ್' ಎಂದು ಭಾಷಣ ಆರಂಭಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.
ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಸುಲ್ತಾನ್ ಸೊೌದ್ ಅಲ್-ಖಸ್ಸೆಮಿ ಅವರು 'ಜೈ ಸಿಯಾ ರಾಮ್' ಎಂದು ಭಾಷಣ ಆರಂಭಿಸಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಸುಲ್ತಾನ್ ಸೊೌದ್ ಅಲ್-ಖಸ್ಸೆಮಿ ಎಮಿರೇಟ್ ನ ಅರಬ್ ವ್ಯವಹಾರಳ ವಕ್ತಾರರಾಗಿದ್ದರು. ರಾಮಕಥಾ ಕಾರ್ಯಕ್ರಮಕ್ಕೆ ಖಸ್ಸೆಮಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಮೊರಾರಿ ಬಾಪು ಅವರ ನೇತೃತ್ವದ ರಾಮ ಕಥಾ ಕಾರ್ಯಕ್ರಮದಲ್ಲಿ ಅಬುಧಾಬಿ ಶೇಖ್ ಸುಲ್ತಾನ್ ಜೈ ಸಿಯಾ ರಾಮ್ ಎಂದು ಭಾಷಣ ಆರಂಭಿಸಿದ್ದು, ಕಳೆದ 2016ರ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದಿರುವ ರಾಮಕಥಾ ಕಾರ್ಯಕ್ರಮದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.