ವಿದೇಶ

ಇಂಡೋ-ಪೆಸಿಫಿಕ್ ಪ್ರದೇಶವನ್ನು ಮರುಕ್ರಮಗೊಳಿಸಲು ಚೀನಾದಿಂದ ನೆರೆ ರಾಷ್ಟ್ರಗಳಿಗೆ ಬೆದರಿಕೆ: ಪೆಂಟಗನ್

Sumana Upadhyaya

ವಾಷಿಂಗ್ಟನ್: ಇಂಡೊ-ಫೆಸಿಫಿಕ್ ಪ್ರದೇಶವನ್ನು ಮರುಕ್ರಮಗೊಳಿಸಲು ಚೀನಾ ತನ್ನ ನೆರೆ ರಾಷ್ಟ್ರಗಳಿಗೆ ಬೆದರಿಕೆಯೊಡ್ಡುತ್ತಿದೆ ಎಂದು ತನ್ನ 2019ನೇ ವಾರ್ಷಿಕ ಬಜೆಟ್ ಪ್ರಸ್ತಾವನೆಯಲ್ಲಿ ಅಮೆರಿಕಾದ ರಕ್ಷಣಾ ಇಲಾಖೆ ಪೆಂಟಗನ್ ಅಮೆರಿಕಾ ಕಾಂಗ್ರೆಸ್ ಗೆ ತಿಳಿಸಿದೆ.

ಅಮೆರಿಕಾದ 2019ನೇ ಸಾಲಿನ ವಾರ್ಷಿಕ ಬಜೆಟ್ ಅಕ್ಟೋಬರ್ 1ರಂದು ಆರಂಭವಾಗಲಿದೆ.ಡೊನಾಲ್ಡ್ ಟ್ರಂಪ್  ಸರ್ಕಾರ ಇಂದು 2019ನೇ ಸಾಲಿನ ಬಜೆಟ್ ಪ್ರಸ್ತಾವನೆಯನ್ನು ಬಿಡುಗಡೆಮಾಡಿತು.

ಹಣಕಾಸು ವರ್ಷ ಕ್ಯಾಲೆಂಡ್ ವರ್ಷಕ್ಕಿಂತ ಭಿನ್ನವಾಗಿರುತ್ತದೆ. ಬಜೆಟ್ ಪ್ರಸ್ತಾವನೆ ಈ ವರ್ಷ ಅಕ್ಟೋಬರ್ 1ರಿಂದ ಮುಂದಿನ ವರ್ಷ ಸೆಪ್ಟೆಂಬರ್ 30ರವರೆಗೆ ಒಳಗೊಂಡಿರುತ್ತದೆ.
ಚೀನಾ ತನ್ನ ಲಾಭಕ್ಕೆ ಇಂಡೊ-ಫೆಸಿಫಿಕ್ ಪ್ರದೇಶವನ್ನು ಮರುಕ್ರಮಗೊಳಿಸಲು ನೆರೆ ದೇಶಗಳನ್ನು ನಿರ್ಬಂಧಿಸಲು ಚೀನಾ ಮಿಲಿಟರಿ ಆಧುನೀಕರಣವನ್ನು ಅತ್ಯುನ್ನತವಾಗಿ ಬಳಸಲು ನೋಡುತ್ತಿದೆ. ಕಾರ್ಯಾಚರಣೆ ಮೇಲೆ ಪ್ರಭಾವ ಬೀರಿ ಆರ್ಥಿಕತೆಯನ್ನು ಸುಲಿಯಲು ಪ್ರಯತ್ನಿಸುತ್ತಿದೆ ಎಂದು ಅಮೆರಿಕಾ ತನ್ನ 2019ನೇ ವಿತ್ತೀಯ ವರ್ಷದ ವಾರ್ಷಿಕ ರಕ್ಷಣಾ ಬಜೆಟ್ ನಲ್ಲಿ ತಿಳಿಸಿದೆ.

ಎಲ್ಲಾ ದೇಶಗಳ ದೀರ್ಘಾವಧಿಯ ಕಾರ್ಯತಂತ್ರದ ಮೂಲಕ ಚೀನಾ ತನ್ನ ಆರ್ಥಿಕ ಮತ್ತು ಮಿಲಿಟರಿ ಅಧಿಕಾರವನ್ನು ಮೆರೆಯಲು ಹವಣಿಸುತ್ತಿದೆ. ಸದ್ಯದಲ್ಲಿಯೇ ಇಂಡೊ-ಫೆಸಿಫಿಕ್ ಪ್ರದೇಶದ ಅಧಿಪತ್ಯ ಸ್ಥಾಪಿಸಲು ಮತ್ತು ಭವಿಷ್ಯದಲ್ಲಿ ಜಾಗತಿಕ ಪ್ರಾಮುಖ್ಯತೆ ಸಾಧಿಸಲು ಮಿಲಿಟರಿ ಅತ್ಯಾಧುನಿಕ ಕಾರ್ಯಕ್ರಮವನ್ನು ಬಳಸಲು ಚೀನಾ ನೋಡುತ್ತಿದೆ ಎಂದು ವಾರ್ಷಿಕ ಬಜೆಟ್ ವರದಿಯಲ್ಲಿ ಹೇಳಿದೆ.

ಇತರ ರಾಷ್ಟ್ರಗಳ ಮೇಲೆ ವೆಟೊ ಅಧಿಕಾರವನ್ನು ಪಡೆದುಕೊಳ್ಳುವ ಸರ್ವಾಧಿಕಾರಿ ಮಾದರಿಯ ಧೋರಣೆಯನ್ನು ಚೀನಾ ಮತ್ತು ರಷ್ಯಾ ರಾಷ್ಟ್ರಗಳು ಹೊಂದಿದ್ದು ಅವುಗಳ ಆರ್ಥಿಕ, ರಾಜತಾಂತ್ರಿಕ ಮತ್ತು ಭದ್ರತಾ ನಿರ್ಧಾರಗಳಲ್ಲಿ ಅದು ಕಂಡುಬರುತ್ತದೆ ಎಂದು ಪೆಂಟಗಾನ್ ಹೇಳಿದೆ.

SCROLL FOR NEXT