ವಿದೇಶ

ಉಗ್ರರಿಗೆ ಆರ್ಥಿಕ ಬೆಂಬಲ ನೀಡುವ ರಾಷ್ಟ್ರಗಳ ಪಟ್ಟಿಗೆ ಪಾಕ್: ಅಮೆರಿಕ ಪ್ರಸ್ತಾವನೆಗೆ ಚೀನಾ, ಸೌದಿ, ಟರ್ಕಿ ವಿರೋಧ

Srinivas Rao BV

ವಾಷಿಂಗ್ ಟನ್: ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದಕ ಆರ್ಥಿಕ ಸಹಕಾರ ನೀಡುತ್ತಿರುವ ರಾಷ್ಟ್ರಗಳ ಪಟ್ಟಿಗೆ ಸೇರಿಸುವ ಅಮೆರಿಕ ಪ್ರಸ್ತಾವನೆಗೆ ಚೀನಾ, ಸೌದಿ ಅರೇಬಿಯಾ, ಟರ್ಕಿ ತೀವ್ರ ವಿರೋಧ ವ್ಯಕ್ತಪಡಿಸಿವೆ.

ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ನಲ್ಲಿ ಅಮೆರಿಕ ಪಾಕಿಸ್ತಾನವನ್ನು ಉಗ್ರರಿಗೆ ಆರ್ಥಿಕ ಸಹಕಾರ ನೀಡುತ್ತಿರುವ ರಾಷ್ಟ್ರಗಳ ಪಟ್ಟಿಗೆ ಸೇರಿಸಲು ಮುಂದಾಗಿತ್ತು. ಆದರೆ ಪಾಕಿಸ್ತಾನದ ಪರಮಾಪ್ತ ರಾಷ್ಟ್ರಗಳಾದ ಚೀನಾ, ಸೌದಿ ಅರೇಬಿಯಾ, ಟರ್ಕಿ ರಾಷ್ಟ್ರಗಳು ವಿಶ್ವದ ಪ್ರಬಲ ರಾಷ್ಟ್ರದ ನಡೆಗೆ ಅಡ್ಡಿ ಉಂಟುಮಾಡಿವೆ.

ಈ ತಕ್ಷಣಕ್ಕೆ ಅಮೆರಿಕ ನಡೆಯ ವಿರುದ್ಧ ಪಾಕಿಸ್ತಾನ ಗೆದ್ದಿದೆ. ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಅಥವಾ ಹಣಕಾಸು ಶಿಸ್ತು ಕಾರ್ಯಪಡೆ (ಎಫ್ಎಟಿಎಫ್) ಸಭೆಯಲ್ಲಿ ಭಯೋತ್ಪಾದನೆಗೆ ಆರ್ಥಿಕ ಸಹಕಾರ ನೀಡುತ್ತಿರುವ ರಾಷ್ಟ್ರಗಳ ವಿರುದ್ಧ ಕ್ರಮ ಕೈಗೊಳ್ಳುವುದು ಹಾಗೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಗಳನ್ನು ಜಾರಿಗೊಳಿಸುವುದು ಮುಖ್ಯ ಉದ್ದೇಶವಾಗಿದೆ.

ಈ ಬಗ್ಗೆ ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಟಿಸಿದ್ದು, ಡೊನಾಲ್ಡ್ ಟ್ರಂಪ್ ಆಡಳಿತದ ಪ್ರಸ್ತಾವನೆಗೆ ಸೌದಿ ಅರೇಬಿಯಾ, ಚೀನಾ, ಟರ್ಕಿ ವಿರೋಧ ವ್ಯಕ್ತಪಡಿಸಿವೆ. ಇದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನ ತನ್ನನ್ನು ಭಯೋತ್ಪಾದಕ ಆರ್ಥಿಕತೆಗೆ ಸಹಕರಿಸುತ್ತಿರುವ ರಾಷ್ಟ್ರಗಳ ಪಟ್ಟಿಗೆ ಸೇರಿಸುವ ಅಮೆರಿಕ ಯತ್ನವನ್ನು ವಿಫಲಗೊಳಿಸಿದ್ದೆವೆ ಎಂದು ಹೇಳಿತ್ತು.

SCROLL FOR NEXT