ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಶೈಲಿಯನ್ನು ಅನುಸರಿಸುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಶೈಲಿಯನ್ನು ಅನುಕರಿಸಿದ್ದ ಟ್ರಂಪ್ ಈ ಬಾರಿ ಭಾಷಣ ಶೈಲಿಯೊಂದಿಗೆ ಅವರ ಭಾರತೀಯ ಭಾಷಾ ಶೈಲಿಯನ್ನೂ ಅನುಕರಿಸಿದ್ದಾರೆ. ವೈಟ್ ಹೌಸ್ ನಲ್ಲಿ ಆಯೋಜನೆಯಾಗಿದ್ದ ಎಲ್ಲ ರಾಜ್ಯಗಳ ಗವರ್ನರ್ ಗಳ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡುತ್ತಾ ಮತ್ತೆ, ಹಾರ್ಲೆ ಡೇವಿಡ್ಸನ್ ಬೈಕ್ ಮೇಲಿನ ತೆರಿಗೆ ವಿನಾಯಿತಿ ಸಂದರ್ಭ ನೆನೆದ ಟ್ರಂಪ್ ಮೋದಿ ಶೈಲಿಯಲ್ಲೇ ಮಾತನಾಡಿದರು.
ಈ ಹಿಂದೆ ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಕರೆ ಮಾಡಿದ್ದ ಪ್ರಧಾನಿ ಮೋದಿ, ಹಾರ್ಲೇ ಡೇವಿಡ್ಸನ್ ಬೈಕ್ ಮೇಲಿನ ಆಮದು ತೆರಿಗೆಯನ್ನು ಶೇ.75ರಿಂದ 50ಕ್ಕೆ ಇಳಿಕೆ ಮಾಡಿರುವುದಾಗಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಸಿದ್ದ ಟ್ರಂಪ್, ಇದಕ್ಕೆ ನಾನು ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ನಾನು ಅಚ್ಚರಿ ಪಡಬೇಕೇ ಎಂದು ಹೇಳಿದ್ದರು.
ಇದೇ ವಿಚಾರವಾಗಿ ಇಂದು ಮತ್ತೆ ಮಾತನಾಡಿರುವ ಟ್ರಂಪ್ ಷೇ.75ರಿಂದ 50ಕ್ಕೆ ಇಳಿಕೆ ಮಾಡಿರುವುದರಿಂದ ತಮಗೇನೂ ಲಾಭವಾಗುತ್ತಿಲ್ಲ. ಅನ್ಯ ದೇಶಗಳ ಬೈಕ್ ಗಳಿಗೆ ಅಮೆರಿಕದಲ್ಲಿ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ಇದೇ ಸೌಲಭ್ಯವನ್ನು ನಾವು ಇತರೆ ರಾಷ್ಟ್ರಗಳಿಂದಲೂ ನಿರೀಕ್ಷಿಸುತ್ತೇವೆ ಎಂದು ಟ್ರಂಪ್ ಹೇಳಿದರು.