ಭೂಕಪಂನದಿಂದ ಹಾನಿಗೀಡಾಗಿರುವ ಮನೆ
ಸಿಡ್ನಿ: ಪಪುವಾ ನ್ಯೂಗಿನಿಯ ಪರ್ವತ ಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಕನಿಷ್ಠ 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿಸಂಸ್ಥೆಯೊಂದು ವರದಿ ಮಾಡಿರುವಂತೆ ಪೆಸಿಫಿಕ್ ಸಮುದ್ರದ ದ್ವೀಪವಾಗಿರುವ ಪಪುವಾ ನ್ಯೂಗಿನಿಯಾದ ಎಂಗಾ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.5ರ ತೀವ್ರತೆ ದಾಖಲಾಗಿದೆ. ಭೂಕಂಪದ ಬಳಿಕ ಈ ವಲಯದಲ್ಲಿ ಎರಡು ಪ್ರಬಲ ತರಂಗ ಕಂಪನಗಳೂ ಸಂಭವಿಸಿವೆ.
ಭೂಕಂಪದಿಂದಾಗಿ ಈ ಪ್ರಾಂತ್ಯದಲ್ಲಿ ದೂರವಾಣಿ, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಹಲವೆಡೆ ಭೂಮಿ ಕುಸಿತು ಹಲವು ಮನೆಗಳು ನೆಲಕ್ಕುರುಳಿವೆ. ಅಂತೆಯೇ ಹಲವು ಬಹುಮಹಡಿ ಕಟ್ಟಡಗಳನು ಬಿರುಕು ಬಿಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸದರ್ನ್ ಐಲ್ಯಾಂಡ್ಸ್ ಪ್ರಾಂತ್ಯದ ರಾಜಧಾನಿ ಮೆಂಡಿಯಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದು, ಸಮೀಪದ ಕುಟುಬು ಮತ್ತು ಬೊಸವೆಗಳಲ್ಲಿ 18 ಮಂದಿ ಮೃತಪಟ್ಟಿದ್ದಾರೆ ಎಂದು ‘ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.
ಭಾರೀ ಪ್ರಮಾಣದಲ್ಲಿ ಭೂಕುಸಿತಗಳು ಸಂಭವಿಸಿದ್ದು, ಸುಮಾರು 300 ಮಂದಿ ಗಾಯಗೊಂಡಿದ್ದಾರೆ ಹಾಗೂ ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ವ್ಯಾಪಕ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ತಿಳಿದುಬಂದಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಆಗ್ನಿಶಾಮಕ ದಳ ಹಾಗೂ ಪ್ರಕೃತಿ ವಿಕೋಪ ನಿರ್ವಹಣಾ ಸಿಬ್ಬಂದಿಗಳು ದೌಡಾಯಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.