ವಿದೇಶ

ಭಾರತ, ಅಮೆರಿಕ, ಜಪಾನ್ ಆತಂಕಕ್ಕೆ ಕಾರಣವಾದ ಚೀನಾದ ಹೈಪರ್ ಸೋನಿಕ್ ಕ್ಷಿಪಣಿ

Lingaraj Badiger
ಬೀಜಿಂಗ್: ಚೀನಾ ಅಭಿವೃದ್ಧಿ ಪಡಿಸಿರುವ ನೂತನ ಕ್ಷಿಪಣಿಯೊಂದು ಇದೀಗ ವಿಶ್ವದ ಬಲಿಷ್ಠ ರಾಷ್ಟ್ರ ದೊಡ್ಡಣ್ಣ ಅಮೆರಿಕ ಮಾತ್ರವಲ್ಲದೆ ಭಾರತ ಹಾಗೂ ಜಪಾನ್ ಗೂ ದೊಡ್ಡ ಸವಾಲಾಗಿ ಪರಿಣಿಮಿಸಿದೆ.
ಅತ್ಯಾಧುನಿಕ ಹಾಗೂ ಅತ್ಯಂತ ಶಕ್ತಿಶಾಲಿ ಹೈಪರ್ ಸೋನಿಕ್ ಖಂಡಾಂತರ ಕ್ಷಿಪಣಿ ಡಿಎಫ್-17 ಹೈಪರ್ ಸೋನಿಕ್ ಗ್ಲೈಡ್ ವೆಹಿಕಲ್ ಅಥವಾ ಎಚ್ ಜಿವಿಯನ್ನು ಕಳೆ ವರ್ಷ ಎರಡು ಬಾರಿ ಯಶಸ್ವಿ ಪರೀಕ್ಷಾರ್ಥ ನಡೆಸಿದ್ದು, ಇದು ಭಾರತ, ಅಮೆರಿಕ ಹಾಗೂ ಜಪಾನ್ ಗೂ ಆತಂಕ ಎದುರಾಗಿದೆ ಎಂದು ದಕ್ಷಿಣ ಚೀನಾದ ಮಾರ್ನಿಂಗ್ ಪೊಸ್ಟ್ ವರದಿ ಮಾಡಿದೆ.
ಕಳೆದ ವರ್ಷ ನವೆಂಬರ್ 1ರಂದು ಮೊದಲ ಬಾರಿ ಹಾಗೂ ಎರಡು ವಾರಗಳ ನಂತರ ಎರಡನೇ ಬಾರಿ ಹೈಪರ್ ಸೋನಿಕ್ ಯಶಸ್ವಿ ಪರೀಕ್ಷಾರ್ಥ ನಡೆಸಿದ್ದು, ಡಿಎಫ್-17 2020ರ ವೇಳೆ ಚೀನಾ ಸೇನೆಗೆ ಸೇರಲಿದೆ ಎಂದು ಅಮೆರಿಕ ಗುಪ್ತಚರ ಮೂಲಗಳು ತಿಳಿಸಿರುವುದಾಗಿ ಮಾರ್ನಿಂಗ್ ಪೊಸ್ಟ್ ವರದಿ ಮಾಡಿದೆ.
ಡಿಎಫ್-17 ಅನ್ನು ಎರಡು ಬಾರಿ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಿದ ಬಗ್ಗೆ ಚೀನಾ ವಿದೇಶಾಂಗ ಸಚಿವ ಗೆಂಗ್ ಶುವಾಂಗ್ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಆ ಬಗ್ಗೆ ರಕ್ಷಣಾ ಸಚಿವರನ್ನು ಕೇಳಿ ಎಂದು ಹೇಳಿದ್ದಾರೆ.
ಚೀನಾ ಪರೀಕ್ಷೆ ಮಾಡಿರುವ ಡಿಎಫ್-17 ಹೈಪರ್ ಸೋನಿಕ್ ಕ್ಷಿಪಣಿಯು ಒಂದು ಹೈ ಸ್ಪೀಡ್ ಮಿಸೈಲ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ವಿಶ್ವದ ಯಾವುದೇ ಕೋನವನ್ನು ಹೊಡೆದುರಳಿಸುವ ಸಾಮರ್ಥ್ಯವನ್ನು ಹೊಂದಿದೆ. ಶಬ್ದಕ್ಕಿಂತಲೂ ಐದು ಪಟ್ಟು ವೇಗದಲ್ಲಿ ಸಂಚರಿಸಬಲ್ಲ ಸಾಮರ್ಥ್ಯದ ಈ ಖಂಡಾಂತರ ಕ್ಷಿಪಣಿಗೆ ಇದೆ.
SCROLL FOR NEXT