ಅಮೆರಿಕ 2 ಬಿಲಿಯನ್ ಡಾಲರ್ ನೆರವು ಸ್ಥಗಿತಗೊಳಿಸಿರುವುದು ಪಾಕಿಸ್ತಾನವನ್ನು ಕೆರಳಿಸಿದ್ದು, ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಅಮೆರಿಕಾಗೆ ಗುಪ್ತಚರ ಹಾಗೂ ರಕ್ಷಣಾ ಸಹಕರವನ್ನು ಸ್ಥಗಿತಳಿಸಿದೆ ಎಂದು ದಿ ನ್ಯೂಸ್ ಇಂಟರ್ ನ್ಯಾಷನಲ್ ಹೇಳಿದೆ.
ದಿ ನ್ಯೂಸ್ ಇಂಟರ್ ನ್ಯಾಷನಲ್ ಪಾಕಿಸ್ತಾನದ ರಕ್ಷಣಾ ಸಚಿವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದೆ. ಆದರೆ ಈ ವರೆಗೂ ಪಾಕಿಸ್ತಾನ ಅಮೆರಿಕಾಗೆ ಸಹಕಾರವನ್ನು ಸ್ಥಗಿತಗೊಳಿಸಿರುವುದು ಅಧಿಕೃತವಾಗಿಲ್ಲ. ಮಂತ್ರಿಗಳು ಹೇಳಿರುವ ಹೇಳಿಕೆ ಪಾಕ್ ಸರ್ಕಾರದ ನಿಲುವನ್ನೂ ಪ್ರತಿನಿಧಿಸುತ್ತದೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ವರದಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ಲಾಮಾಬಾದ್ ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಪಾಕ್ ಅಮೆರಿಕಾಗೆ ಸಹಕಾರ ಸ್ಥಗಿತಗೊಳಿಸಿರುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದಿದೆ.