ಇಸ್ಲಾಮಾಬಾದ್: ಪಾಕಿಸ್ತಾನ ಮುಸ್ಲಿಂ ಲೀಗ್ ಸದಸ್ಯ ಅಬ್ದುಲ್ ಬಿಜೆಂಜೋ ಅವರನ್ನು ಬಲೂಚಿಸ್ತಾನದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಬಿಜೆಂಜೋ ಪಾಕಿಸ್ತಾನ್ ಮುಸ್ಲಿಂ ಲೀಗ್-ಕ್ವೈಡ್(ಪಿಎಂಎಲ್-ಕ್ಯೂ) ಸದಸ್ಯ ಹಾಗೂ ವಿಧಾನಸಭೆಯಲ್ಲಿ ಉಪ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ವಿಧಾನಸಭೆಯಲ್ಲಿ 65 ಸದಸ್ಯರ ಪೈಕಿ ಪಿಎಂಎಲ್-ಕ್ಯೂ ಪಕ್ಷದ ಐವರು ಮಾತ್ರ ಸದಸ್ಯರಾಗಿದ್ದಾರೆ. ಬಿಜೆಂಜೋ 2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಲೂಚಿಸ್ತಾನದ ಅವಾರ್ನಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.
ಪಕ್ತಾನ್ಕ್ವಾ ಮಿಲ್ಲಿ ಅವಾಮಿ ಪಕ್ಷದ ಸೈಯದ್ ಅಘಾ ಲಿಖತ್ ಅಲಿ ವಿರುದ್ಧ 41 ಮತಗಳನ್ನು ಪಡೆಯುವ ಮೂಲಕ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ಸೈಯದ್ ಕೇವಲ 13 ಮತಗಳನ್ನು ಪಡೆದಿದ್ದಾರೆ.
ವಿಧಾನಸಭೆಯಲ್ಲಿ ಆಡಳಿತ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ನ 21 ಸದಸ್ಯರಿದ್ದರು ಪಕ್ಷದ ಅಭ್ಯರ್ಥಿಯನ್ನು ಬೆಂಬಲ ಸೂಚಿಸದೇ ಪ್ರತಿಸ್ಪರ್ಧಿ ಪಕ್ಷದ ಅಭ್ಯರ್ಥಿ ಬಿಜೆಂಜೊಗೆ ಮತ ಹಾಕಿದ್ದಾರೆ.
ಬಲೂಚಿಸ್ತಾನದ ಮುಖ್ಯಮಂತ್ರಿ ಸನಾಹುಲ್ಲಾ ಝೆಹ್ರಿ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics