ಸಂಗ್ರಹ ಚಿತ್ರ 
ವಿದೇಶ

ಉಗ್ರ ಹಫೀಜ್ ಸಯ್ಯೀದ್ ನನ್ನು ಕಾನೂನಾತ್ಮಕವಾಗಿ ಸಂಪೂರ್ಣ ವಿಚಾರಣೆಗೊಳಪಡಿಸಬೇಕು: ಅಮೆರಿಕ

ಉಗ್ರ ಹಫೀಜ್ ಸಯ್ಯೀದ್ ನನ್ನು ಕಾನೂನಾತ್ಮಕವಾಗಿ ಸಂಪೂರ್ಣ ವಿಚಾರಣೆಗೊಳಪಡಿಸಬೇಕು ಎಂದು ಅಮೆರಿಕ ಪಾಕಿಸ್ತಾನಕ್ಕೆ ಆಗ್ರಹಿಸಿದೆ.

ವಾಷಿಂಗ್ಟನ್: ಉಗ್ರ  ಹಫೀಜ್ ಸಯ್ಯೀದ್ ನನ್ನು ಕಾನೂನಾತ್ಮಕವಾಗಿ ಸಂಪೂರ್ಣ ವಿಚಾರಣೆಗೊಳಪಡಿಸಬೇಕು ಎಂದು ಅಮೆರಿಕ ಪಾಕಿಸ್ತಾನಕ್ಕೆ ಆಗ್ರಹಿಸಿದೆ.
ಇತ್ತೀಚೆಗಷ್ಟೇ ಪಾಕಿಸ್ತಾನ ಪ್ರಧಾನಿ ಶಹೀದ್ ಖಖಾನ್ ಅಬ್ಬಾಸಿ ಹಫೀಜ್ ಸಯ್ಯೀದ್ ಪರವಾಗಿ ಮಾತನಾಡಿ ಪ್ರಕರಣದ ದಾಖಲಾಗದ ಹೊರತು ವಿಚಾರಣೆ ಸಾಧ್ಯವಿಲ್ಲ ಎಂದು ಹೇಳಿದ್ದರು. ಜಿಯೋ ಟಿವಿಗೆ ಸಂದರ್ಶನ ನೀಡಿರುವ  ಪಾಕ್ ಪ್ರಧಾನಿ ಶಾಹೀದ್ ಖಾನ್ ಅಬ್ಬಾಸಿ ಅಂತಾರಾಷ್ಟ್ರೀಯ ಭಯೋತ್ಪಾದಕ ಹಫೀಜ್ ಸಯ್ಯೀದ್ ನನ್ನು ಸಾಹಬ್ ಎಂದು ಸಂಬೋಧಿಸಿದ್ದು, ಮಾತ್ರವಲ್ಲದೇ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.   ಲಾಹೋರ್ ಹೈಕೋರ್ಟ್‌ ಆದೇಶದ ಮೇರೆಗೆ ಇತ್ತೀಚೆಗೆ ಗೃಹಬಂಧನದಿಂದ ಬಿಡುಗಡೆಯಾಗಿರುವ ಜಮಾತ್‌ ಉದ್‌ ದಾವಾ ಮುಖ್ಯಸ್ಥ ಸಯೀದ್‌ ವಿರುದ್ಧ ಯಾವಾಗ ಕ್ರಮ ಕೈಗೊಳ್ಳುವಿರಿ ಎಂಬ ಪ್ರಶ್ನೆಗೆ ಪಾಕ್‌ ಪ್ರಧಾನಿ ಈ ರೀತಿ  ಉತ್ತರಿಸಿದ್ದು,  "ಹಫೀಜ್ ಸಯ್ಯೀದ್ ಸಾಹಬ್ ವಿರುದ್ಧ ಪಾಕಿಸ್ತಾನದಲ್ಲಿ ಯಾವುದೇ ಪ್ರಕರಣಗಳೂ ದಾಖಲಾಗಿಲ್ಲ.. ಹೀಗಿರುವಾಗ ಭಾರತ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದು, ಭಾರತ ಒತ್ತಡ ಹೇರಿದ ಮಾತ್ರಕ್ಕೆ ಅವರ ವಿರುದ್ಧ  ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ವಿರುದ್ಧ ಯಾವುದೇ ಕೇಸು ದಾಖಲಾದಲ್ಲಿ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯ" ಎಂದು ಅಬ್ಬಾಸಿ ಹೇಳಿದ್ದರು.
ಪಾಕಿಸ್ತಾನದ ಈ ನಿಲುವಿಗೆ ಇದೀಗ ಅಮೆರಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಸರ್ಕಾರದ ವಕ್ತಾರ ಹೀದರ್ ನೌರ್ಟ್ ಅವರು, ಉಗ್ರ ಹಫೀಜ್ ಸಯ್ಯೀದ್ ನನ್ನು ಕಾನೂನಾತ್ಮಕವಾಗಿ  ಸಂಪೂರ್ಣ ವಿಚಾರಣೆ ನಡೆಸಬೇಕು. ಯುಎನ್ ಎಸ್ ಸಿ 1267 ನಿರ್ಬಂಧ ಸಮಿತಿಯು. ಅಲ್ ಖೈದಾ, ತಾಲಿಬಾನ್ ಉಗ್ರ ಸಂಘಟನೆಗಳಿಗೆ ಹಫೀಜ್ ನೆರವು ನೀಡಿದ್ದರ ಸಂಬಂಧ ಆತನ ವಿರುದ್ಧ ನಿರ್ಬಂಧಕ್ಕೆಮುಂದಾಗಿತ್ತು.  ಆದರೆ  ಪ್ರಸ್ತುತ ಪಾಕಿಸ್ತಾನ ಸರ್ಕಾರದ ಹೇಳಿಕೆಗಳನ್ನು ಗಮನಿಸುತ್ತಿದ್ದರೆ ಆತಂಕವಾಗುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು