ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಬಾಲಕನ ಮೇಲೆ ಮಲತಾಯಿಯಿಂದ ಚಿತ್ರಹಿಂಸೆ, ನಿಮ್ಮ ಅಮ್ಮನ ಜತೆ ನೀನ್ಯಾಕೆ ಸಾಯಲಿಲ್ಲ?

ಪುಟ್ಟ ಬಾಲಕನ ಮೇಲೆ ಮಲತಾಯಿಗೇಕೆ ಇಂತಾ ಕ್ರೌರ್ಯ. ಎಷ್ಟೇ ಆದರೂ ಅವನು ತನ್ನ ಮಗನಂತಲ್ಲವೇ. ಇಂತಾ ಆಲೋಚನೆ ಮಾಡದೇ ಮಲತಾಯಿಯೊಬ್ಬರು ಬಾಲಕನ ಮೇಲೆ...

ಸಂಗ್ರಹ ಚಿತ್ರ
Vishwanath S
Updated On : 8 Jul 2018, 1:06 am
ಪುಟ್ಟ ಬಾಲಕನ ಮೇಲೆ ಮಲತಾಯಿಗೇಕೆ ಇಂತಾ ಕ್ರೌರ್ಯ. ಎಷ್ಟೇ ಆದರೂ ಅವನು ತನ್ನ ಮಗನಂತಲ್ಲವೇ. ಇಂತಾ ಆಲೋಚನೆ ಮಾಡದೇ ಮಲತಾಯಿಯೊಬ್ಬರು ಬಾಲಕನಿಗೆ ಚಿತ್ರಹಿಂಸೆ ನೀಡಿದ್ದಾಳೆ. 
ಕೆಲಸ ನಿಮಿತ್ತ ಗಂಡ ಮನೆಯಿಂದ ಹೊರಹೋಗುತ್ತಿದ್ದಂತೆ ಮಲತಾಯಿ ಹಾಗೂ ಆಕೆಯ ಮಕ್ಕಳು ನಾಲ್ಕು ವರ್ಷದ ಪುಟ್ಟ ಬಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಚಪ್ಪಲಿ ಮೆಟ್ಟಿರುವ ಕಾಲಿನಿಂದ ಬಾಲಕನ ತಲೆಗೆ ಒದ್ದಿರುವುದು. ಮಲತಾಯಿಯ ಕ್ರೌರ್ಯಕ್ಕೆ ಪುಟ್ಟ ಬಾಲಕ ಭಯಭೀತನಾಗಿರುವ ದೃಶ್ಯಗಳು ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸದ್ಯ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು ಪುಟ್ಟ ಬಾಲಕ ನೋವಿನ ಕ್ಷಣಗಳು ನೋಡುಗರ ಮನಕಲಕುವಂತಿದೆ. 
ಹೆಂಡತಿ ಮೃತಪಟ್ಟ ನಂತರ ಉದ್ಯಮಿ ಮನೆಯ ಕಡೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗದಿದ್ದರಿಂದ ಎರಡನೇ ಮದುವೆ ಮಾಡಿಕೊಂಡು ಮನೆಯ ಜವಾಬ್ದಾರಿಯನ್ನು ಹೆಂಡತಿಗೆ ನೀಡಿದ್ದಾನೆ. ಎರಡನೇ ಹೆಂಡತಿಗೆ ಇದಕ್ಕೂ ಮುಂಚೆ ಮದುವೆಯಾಗಿದ್ದು ಆಕೆಗೆ ಮಕ್ಕಳಿದ್ದರು. ಮನೆಯಲ್ಲಿದ್ದ ಪುಟ್ಟ ಬಾಲಕ ಸಣ್ಣ ತಪ್ಪು ಮಾಡಿದ್ದರಿಂದ ಕೋಪಗೊಂಡ ಮಲ ತಾಯಿ ಆತನ ಮೇಲೆ ಹಲ್ಲೆ ನಡೆಸಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments