ಕೊಲೊಂಬೊ: ಡ್ರಗ್ ಸಂಬಂಧಿತ ಅಪರಾಧಗಳಿಗೆ ಮರಣ ದಂಡನೆಯಂತಹ ಕಠಿಣ ಶಿಕ್ಷೆ ವಿಧಿಸುವ ಸೂಚನೆಗೆ ಸುಮಾರು 40 ವರ್ಷಗಳ ನಂತರ ಶ್ರೀಲಂಕಾ ಸರ್ಕಾರ ಸರ್ವಾನುಮತದಿಂದ ಅನುಮೋದನೆ ನೀಡಿದೆ.
1978 ರಿಂದಲೂ ಶ್ರೀಲಂಕಾದಲ್ಲಿ ಮರಣದಂಡನೆ ನಡೆಸಿಲ್ಲ, ಸತತವಾಗಿ ಅಧ್ಯಕ್ಷರಾದವರೂ ಕೂಡಾ ಮರಣದಂಡನೆಗಳನ್ನು ವಿಧಿಸಲು ನಿರಾಕರಿಸಿದರು. ಗಂಭೀರ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಇತ್ತೀಚಿಗೆ ಹೇಳಿಕೆ ನೀಡಿದ್ದರು ಎಂದು ಸಚಿವ ಗಾಮಿನಿ ಜಯವಿಕ್ರೇಮಾ ಪೆರೆರಾ ತಿಳಿಸಿದ್ದಾರೆ.