ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ನವಜಾ ಷರೀಫ್ 300 ಬಿಲಿಯನ್ ರು ಹಣವನ್ನು ಲೂಟಿ ಮಾಡಿದ್ದಾರೆ, ಅದನ್ನು ವಾಪಸ್ ನೀಡಬೇಕು ಎಂದು ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ಹೇಳಿದ್ದಾರೆ.
ಕರಾಚಿ ಕಂಪನಿಯಲ್ಲಿ ಕೆಲಸಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಜುಲೈ 25 ಕ್ಕೆ ಪಾಕಿಸ್ತಾನ ಬದಲಾವಣೆಯಾಗುತ್ತದೆ ಎಂದು ಹೇಳಿರುವ ಅವರು ಭ್ರಷ್ಟಾಚಾರದ ಉಗುರು ಮತ್ತು ಹಲ್ಲುಗಳನ್ನು ಬುಡ ಸಮೇತ ಕಿತ್ತು ಹಾಕುವ ಭರವಸೆ ನೀಡಿದ್ದಾರೆ.
ತೆರಿಗೆ ಕಳ್ಳರನ್ನು ಎನ್ ಎ ಬಿ ಮತ್ತು ಎಫ್ ಐಎ ತನಿಖಾ ಸಂಸ್ಥೆಗಳ ವಶಕ್ಕೆ ನೀಡಲಾಗುವುದು ಎಂದು ಹೇಳಿದ್ದಾರೆ. ದೇಶದ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.