ಭ್ರಷ್ಠಾಚಾರ ಪ್ರಕರಣ: ನವಾಜ್ ಶರೀಫ್, ಮರಿಯಮ್ ಗೆ ಜಾಮೀನು ನಕಾರ
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಮತ್ತು ಅವರ ಪುತ್ರಿ ತಮ್ಮ ’ಬಿಡುಗಡೆಗಾಗಿ’ ಕೋರಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಸ್ಲಾಮಾಬಾದ್ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.
ಭ್ರಷ್ಟಾಚಾರ ಪ್ರಕರಣಗಳಲ್ಲಿ ಪಾಲ್ಗೊಂಡ ಆರೋಪದಡಿ ಬಂಧಿತರಾಗಿರುವ ಶರೀಫ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.
ಲಂಡನ್ ನಲ್ಲಿ ಅಕ್ರಮವಾಗಿ ನಾಲ್ಕು ಐಷಾರಾಮಿ ಫ್ಲ್ಯಾಟ್ ಗಳನ್ನು ಹೊಂದಿದ್ದ ಆರೊಪದಡಿ ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್ ಹಾಗು ಅವರ ಪುತ್ರಿ ಮರಿಯಮ್ ಅವರನ್ನು ಶುಕ್ರವಾರ ಬಂಧಿಸಲಾಗಿತ್ತು.
ಇಸ್ಲಾಮಾಬಾದ್ ನ್ಯಾಯಾಲಯವು ಶರೀಫ್ ಅವರಿಗೆ 10 ವರ್ಷ ಜೈಲು ಶಿಕ್ಷೆ ಮತ್ತು ಲ್ಲಿ 8 ಮಿಲಿಯನ್ (72 ಕೋಟಿ) ರು. ದಂಡ ವಿಧಿಸಿ ತೀರ್ಪು ನೀಡಿದ್ದರೆ ಶರೀಫ್ ಮಗಳಾದ ಮೇರಿಯಮ್ ಗೆ ಏಳು ವರ್ಷ ಜೈಲು ಶಿಕ್ಷೆ ಹಾಗು 2 ಮಿಲಿಯನ್ (18.18 ಕೋಟಿ) ರು. ದಂಡ ವಿಧಿಸಲಾಗಿತ್ತು. ಶರೀಫ್ ಅಳಿಯ ನಿವೃತ್ತ ಕ್ಯಾಪ್ಟನ್ ಸಫ್ದಾರ್ ಅವರಿಗೆ ಸಹ ಯಾವ ದಂಡ ವಿಧಿಸದೆ ಹೋದರೂ ಒಂದು ವರ್ಷ ಕಾಲ ಜೈಲು ವಾಸದ ಶಿಕ್ಷೆಗೆ ಗುರಿಪಡಿಸಲಾಗಿದೆ.