ವಿದೇಶ

ಚೀನಾದ ಎಲ್ಲಾ ಉತ್ಪನ್ನಗಳ ಮೇಲೆ ಆಮದು ಸುಂಕ: ಟ್ರಂಪ್‌

Lingaraj Badiger
ವಾಷಿಂಗ್ಟನ್‌: ಚೀನಾದಿಂದ ಆಮದು ಮಾಡಿಕೊಳ್ಳುವ ಸುಮಾರು 500 ಬಿಲಿಯನ್ ಡಾಲರ್‌ ಮೌಲ್ಯದ ಚೀ ಎಲ್ಲಾ ಉತ್ಪನ್ನಗಳ ಮೇಲೆ ಸುಂಕ ಹೇರಲು ತಾನು ಬಯಸಿರುವುದಾಗಿ ಅಮೆರಿಕ ಅಧ್ಯಕ್ಷ  ಡೊನಾಲ್ಡ್‌ ಟ್ರಂಪ್‌ ಅವರು ಶುಕ್ರವಾರ ಹೇಳಿದ್ದಾರೆ.
ನಾನು 500 ಬಿಲಿಯ ಡಾಲರ್‌ ವರೆಗೂ ಆಮದು ಸುಂಕ ವಿಧಿಸಿಲು ಸಿದ್ದನಿದ್ದೇನೆ ಎಂದು ಟ್ರಂಪ್ ಸಿಎನ್‌ಬಿಸಿ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನಾನಿದನ್ನು ರಾಜಕಾರಣಕ್ಕಾಗಿ ಮಾಡುತ್ತಿಲ್ಲ; ನನ್ನ ದೇಶಕ್ಕೆ ಸರಿಯಾದುದನ್ನೇ ಮಾಡುವ ಸಲುವಾಗಿ ನಾನಿದನ್ನು ಮಾಡುತ್ತಿದ್ದೇನೆ. ಬಹಳ ದೀರ್ಘ‌ಕಾಲದಿಂದಲೂ ಚೀನಾ ನಮ್ಮನ್ನು ಹರಿದು ಸುಲಿದಿದೆ ಎಂದು ಟ್ರಂಪ್‌ ಆರೋಪಿಸಿದ್ದಾರೆ.
2017ರಲ್ಲಿ ಆಮೆರಿಕ ಚೀನದಿಂದ 505.50 ಬಿಲಿಯ ಡಾಲರ್‌ಗಳ ಉತ್ಪನ್ನಗಳನ್ನು ಆಮದಿಸಿಕೊಂಡಿತ್ತು.
SCROLL FOR NEXT