ವಿದೇಶ

ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ 2018: ಮತದಾನದ ವೇಳೆ ಆತ್ಮಹತ್ಯಾ ಬಾಂಬ್ ಸ್ಫೋಟ, 34 ಸಾವು

Srinivasamurthy VN
ಇಸ್ಲಾಮಾಬಾದ್: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ 2018ರ ಮತದಾನ ಪ್ರಕ್ರಿಯೆ ಆರಂಭವಾಗಿರುವಂತೆಯೇ ಅತ್ತ ಬಲೂಚಿಸ್ತಾನದಲ್ಲಿ ನಡೆದ ಭೀಕರ ಬಾಂಬ್ ಸ್ಫೋಟದಿಂದಾಗಿ 34 ಮಂದಿ ಸಾವನ್ನಪ್ಪಿ, 36 ಜನರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ಬಲೂಚಿಸ್ತಾನದ ಖ್ವೆಟ್ಟಾದಲ್ಲಿ ಈ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, ಮತಗಟ್ಟೆ ಸಮೀಪವೇ ಸ್ಫೋಟ ನಡೆದಿರುವುದರಿಂದ ಮತದಾನಕ್ಕೆ ಆಗಮಿಸಿದ್ದ ಹತ್ತಾರು ಮಂದಿ ಸಾವಿಗೀಡಾಗಿದ್ದಾರೆ. ಮೂಲಗಳ ಪ್ರಕಾರ ಅನಾಮಿಕ ವ್ಯಕ್ತಿಯೋರ್ವ ಖ್ವೆಟ್ಟಾದ ಮತಗಟ್ಟೆಯೊಳಗೆ ಪ್ರವೇಶ ಮಾಡಲು ಯತ್ನಿಸಿದ್ದು, ಈ ವೇಳೆ ಭದ್ರತಾ ಅಧಿಕಾರಿಗಳು ಆತನನ್ನು ತಡೆದಿದ್ದಾರೆ. ಈ ಸಂದರ್ಭದಲ್ಲಿ ಕೂಡಲೇ ಆತ ತನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದ ಬಾಂಬ್ ಅನ್ನು ಸ್ಫೋಟಿಸಿಕೊಂಡಿದ್ದಾನೆ.
ಘಟನೆಯಲ್ಲಿ 34 ಮಂದಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಮತಗಟ್ಟೆ ಬಳಿ ಮತದಾನ ಮಾಡಲು ನೂರಾರು ಮಂದಿ ಸಾಲುಗಟ್ಟಿ ನಿಂತಿದ್ದರು. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ಜಾರೆ.
ಸ್ಫೋಟದ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ
ಇನ್ನು ಬಾಂಬ್ ದಾಳಿ ನಡೆಸಿದ್ದು ನಾನೇ ಎಂದು ಕುಖ್ಯಾತ ಉಗ್ರ ಸಂಘಟನೆ ಇಸಿಸ್ ಹೇಳಿಕೊಂಡಿದ್ದು, ಈ ಬಗ್ಗೆ ತನ್ನ ಮುಖವಾಣಿ ಅಮಾಕ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ. 
ಇನ್ನು ಹಾಲಿ ಚುನಾವಣೆಯನ್ನು ಮಾಜಿ ಪ್ರಧಾನಿ ನವಾಜ್ ಷರೀಪ್ ಹಾಗೂ ಇಮ್ರಾನ್ ಖಾನ್ ಅವರ ನಡುವಿನ ಸ್ಪರ್ಧೆ ಎಂದು ಬಿಂಬಿಸಲಾಗುತ್ತಿದೆಯಾದರೂ, ಇದೇ ಮೊದಲ ಬಾರಿಗೆ ಸ್ಥಳೀಯ ಪಕ್ಷದೊಂದಿಗೆ ಸೇರಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕುಖ್ಯಾತ ಉಗ್ರ ಹಾಗೂ ಮುಂಬೈ ದಾಳಿ ರೂವಾರಿ ಹಫೀಜ್ ಸಯ್ಯೀದ್ ಕೂಡ ಕಿಂಗ್ ಮೇಕರ್ ಆಗಲು ಹೊರಟಿದ್ದಾನೆ.
SCROLL FOR NEXT