ವಿದೇಶ

ಪಾಕ್ ಚುನಾವಣೆ ಮತ ಎಣಿಕೆ: ಇಮ್ರಾನ್ ಖಾನ್ ಪಕ್ಷಕ್ಕೆ ಮುನ್ನಡೆ, ಆಡಳಿತಾರೂಢ ಪಿಎಂಎಲ್-ಎನ್ ಗೆ ಹಿನ್ನಡೆ

Srinivas Rao BV
ಇಸ್ಲಾಮಾಬಾದ್: ಜು.25 ರಂದು 272ಕ್ಷೇತ್ರಗಳಿಗೆ ನಡೆದ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ- ಇನ್ಸಾಫ್ ಪಕ್ಷ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ. 
ಪಾಕಿಸ್ತಾನಿ ಸಾಮಾ ಟಿವಿಯ ಇತ್ತೀಚಿನ ವರದಿಯ ಪ್ರಕಾರ, ಪಿಟಿಐ ಪಕ್ಷ 105ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಕ್ಷ ಪಿಎಂಎಲ್-ಎನ್ 71 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಪಾಕಿಸ್ತಾನದ ಮತ್ತೊಂದು ಪ್ರಮುಖ ಪಕ್ಷ ಆಸಿಫ್ ಅಲಿ ಝರ್ದಾರಿ ನೇತೃತ್ವದ ಪಿಪಿಪಿ ಪಕ್ಷ 39 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಪಕ್ಷೇತರ ಅಭ್ಯರ್ಥಿಗಳು 23 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. 
ಪಾಕಿಸ್ತಾನದ ಸಾಂಪ್ರದಾಯಿಕ ಧಾರ್ಮಿಕ ಪಕ್ಷಗಳ ಒಕ್ಕೂಟ ಮುತ್ತಾಹಿದ್ ಮಜ್ಲೀಸ್-ಎ-ಅಮಾಲ್(ಎಂಎಂಎ) 9, ಎಂಕ್ಯುಎಂ ಪಕ್ಷ 7 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. 
SCROLL FOR NEXT