ವಿದೇಶ

ಟ್ರಂಪ್ ನಿರ್ಧಾರಗಳಿಂದ ಚೀನಾ ಸಂಸ್ಥೆಗಳಿಗೆ ಕಾಡುತ್ತಿದೆ ದಿವಾಳಿತನದ ಭಯ!

Srinivas Rao BV
ಅಮೆರಿಕ- ಚೀನಾ ನಡುವಿನ ಟ್ರೇಡ್ ವಾರ್ ಹೊಸ ಮಟ್ಟಕ್ಕೆ ತಲುಪಿದ್ದು, ಡೊನಾಲ್ಡ್ ಟ್ರಂಪ್ ಕೈಗೊಳ್ಳುತ್ತಿರುವ ವಾಣಿಜ್ಯ ವಿಷಯದ ನಿರ್ಧಾರಗಳು ಚೀನಾ ಸಂಸ್ಥೆಗಳಲ್ಲಿ ದಿವಾಳಿತನದ ಭಯ ಉಂಟು ಮಾಡಿದೆ. 
ಈ ಬಗ್ಗೆ ಚೀನಾದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಾತನಾಡಿದ್ದು, ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಗಳು ಅಂತಿಮವಾಗಿ ಚೀನಾದ ಹಲವು ಸಂಸ್ಥೆಗಳನ್ನು ದಿವಾಳಿತನಕ್ಕೆ ತಳ್ಳುತ್ತವೆ ಎಂದು ಆತಂಕ ವ್ಯತ್ಕಪಡಿಸಿದ್ದಾರೆ. 
ಅಮೆರಿಕ-ಚೀನಾ ನಡುವಿನ ಟ್ರೇಡ್ ವಾರ್ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಚೀನಾದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಅಮೆರಿಕ ಚೀನಾ ಸಂಸ್ಥೆಗಳ ಮೇಲೆ ಹೆಚ್ಚು ಆಮದು ಸುಂಕ ವಿಧಿಸಿದಷ್ಟೂ ಹೆಚ್ಚು ಸಂಸ್ಥೆಗಳು ದಿವಾಳಿತನ ಎದುರಿಸುವ ಭಯದಲ್ಲಿರುತ್ತವೆ ಎಂದು ಚೀನಾ ಆತಂಕ ವ್ಯಕ್ತಪಡಿಸಿದೆ. ಇತ್ತೀಚೆಗಷ್ಟೇ ಟ್ರಂಪ್ ಚೀನಾದ ರಫ್ತಿನ ಮೇಲೆ ಶೇ.25  ರಷ್ಟು ತೆರಿಗೆ ವಿಧಿಸಿದ್ದರು. 
SCROLL FOR NEXT