ಪ್ರಧಾನಿ ಮೋದಿ, ಕ್ಸಿ ಜಿನ್ ಪಿಂಗ್ 
ವಿದೇಶ

ಎಸ್ ಸಿಒ ಶೃಂಗಸಭೆ: ಬ್ರಹ್ಮಪುತ್ರ ದತ್ತಾಂಶ ಹಂಚಿಕೆ ಸೇರಿ ಎರಡು ಒಪ್ಪಂದಗಳಿಗೆ ಭಾರತ - ಚೀನಾ ಸಹಿ

ಬ್ರಹ್ಮಪುತ್ರ ನದಿಯಲ್ಲಿ ಹರಿಯುವ ನೀರಿನ ಪ್ರಮಾಣದ ಬಗ್ಗೆ ದತ್ತಾಂಶ ಹಂಚಿಕೊಳ್ಳುವ ಒಪ್ಪಂದ ಸೇರಿದಂತೆ ಎರಡು ಪ್ರಮುಖ...

ಕಿಂಗ್ಡಾವೋ: ಬ್ರಹ್ಮಪುತ್ರ ನದಿಯಲ್ಲಿ ಹರಿಯುವ ನೀರಿನ ಪ್ರಮಾಣದ ಬಗ್ಗೆ ದತ್ತಾಂಶ ಹಂಚಿಕೊಳ್ಳುವ ಒಪ್ಪಂದ ಸೇರಿದಂತೆ ಎರಡು ಪ್ರಮುಖ ಒಪ್ಪಂದಗಳಿಗೆ ಭಾರತ ಮತ್ತು ಚೀನಾ ಶನಿವಾರ ಸಹಿ ಹಾಕಿವೆ.
ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆಯ 18ನೇ ಶೃಂಗಸಭೆ(ಎಸ್ ಸಿಒ)ಯಲ್ಲಿ ಪಾಲ್ಗೊಳ್ಳಲುಚೀನಾದ ಕ್ವಿಂಗ್ಡಾವೋಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ಚೀನಾದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಮಾತುಕತೆ ಬಳಿಕ ಬ್ರಹ್ಮಪುತ್ರ ನದಿ ನೀರಿನ ದತ್ತಾಂಶ ಹಂಚಿಕೆ ಹಾಗೂ ಭಾರತದಿಂದ ಬಾಸುಮತಿಯೇತರ ಅಕ್ಕಿ ಆಮದು ಒಪ್ಪಂದಕ್ಕೆ ಉಭಯ ನಾಯಕರು ಸಹಿ ಹಾಕಿದರು.
ಹೊಸ ಒಪ್ಪಂದದ ಪ್ರಕಾರ, ಚೀನಾ ಬ್ರಹ್ಮಪುತ್ರ ನದಿಯಲ್ಲಿ ಮೇ 15ರಿಂದ ಅಕ್ಟೋಬರ್ 15ರ ಅವಧಿಯಲ್ಲಿ ಹರಿಯುವ ನೀರಿನ ಪ್ರಮಾಣದ ಬಗ್ಗೆ ಭಾರತಕ್ಕೆ ಮಾಹಿತಿ ನೀಡಲಿದೆ. ಇದರಿಂದ ಅಸ್ಸಾಂನಲ್ಲಿ ತಲೆದೋರುವ ಪ್ರವಾಹವನ್ನು ಎದುರಿಸಲು ಭಾರತವು ಅಗತ್ಯ ಕ್ರಮ ತೆಗೆದುಕೊಳ್ಳಲು ನೆರವಾಗಲಿದೆ.
ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಭಾಗವಾಗಿ ನಡೆದ ಚರ್ಚೆಯಲ್ಲಿ  ಭಯೋತ್ಪಾದನೆ, ಉಗ್ರಗಾಮಿತ್ವ ಹಾಗೂ ತೀವ್ರಗಾಮಿತ್ವದ ವಿರುದ್ಧದ ಹೋರಾಟದಲ್ಲಿ ಪರಸ್ಪರ ಸಹಕಾರ ಸೇರಿದಂತೆ ಅನೇಕ ಜಾಗತಿಕ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್ ಪಿಂಗ್ ಚರ್ಚೆ ನಡೆಸಿದ್ದಾರೆ.
ವೂಹಾನ್ ಅನೌಪಚಾರಿಕ ಶೃಂಗಸಭೆಯಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳನ್ನು ಅನುಷ್ಠಾನಗೊಳಿಸುವಲ್ಲಿ ಮೋದಿ ಮತ್ತು ಕ್ಸಿ ಅವರು ಪ್ರಗತಿ ಸಾಧಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ