ರೆಹಮ್ ಖಾನ್ 
ವಿದೇಶ

ಪ್ರತಿಯೊಬ್ಬರಿಗೂ ಬೇಕಿರುವುದು ಶಾಂತಿಯೇ ಹೊರತು ಯುದ್ದವಲ್ಲ: ರೆಹಮ್ ಖಾನ್

ಭಾರತ-ಪಾಕಿಸ್ತಾನ ಬಾಂಧವ್ಯಕ್ಕೆ ಬೇಕಿರುವುದು ಶಾಂತಿಯೇ ಹೊರತು ಯುದ್ದವಲ್ಲ ಎಂದು ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ...

ಲಂಡನ್: ಭಾರತ-ಪಾಕಿಸ್ತಾನ ಬಾಂಧವ್ಯಕ್ಕೆ ಬೇಕಿರುವುದು ಶಾಂತಿಯೇ ಹೊರತು ಯುದ್ದವಲ್ಲ ಎಂದು ಪತ್ರಕರ್ತೆ  ಹಾಗೂ ಸಾಮಾಜಿಕ ಕಾರ್ಯಕರ್ತೆ ರೆಹಮ್ ಖಾನ್ ಹೇಳಿದ್ದಾರೆ.
ಎಎನ್ ಐ ಸುದ್ದಿ ಸಂಸ್ಥೆ ಸಂದರ್ಶನದಲ್ಲಿ ಮಾತನಾಡಿರುವ ಅವರು.ನಮ್ಮ ಗಡಿಗಳು, ರಸ್ತೆಗಳು ಮತ್ತು ನಮ್ಮ ಜನಗಳು ಸಂಪರ್ಕದಲ್ಲಿವೆ, ನಮ್ಮ ಪರಿಹಾರಗಳು ಸಂಪರ್ಕಗೊಂಡಿವೆ ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ. ನಮ್ಮ ಪರಿಹಾರಗಳು ಸಹಭಾಗಿತ್ವದಲ್ಲಿರಬೇಕು, ಯುದ್ದಗಳು ಇದಕ್ಕೆ ಸರಿಹೊಂದುವುದಿಲ್ಲ, ಪ್ರತಿಯೊಬ್ಬರಿಗೂ ಶಾಂತಿ ಬೇಕಿದೆ, ಆದಷ್ಟು ಬೇಗ ನಾವಿದನ್ನು ಅರ್ಥ ಮಾಡಿಕೊಳ್ಳುತ್ತೇವೆ ಎಂದು ನನಗನ್ನಿಸುತ್ತದೆ ಎಂದು ಹೇಳಿದ್ದಾರೆ.
ಶಾಂತಿ ಮತ್ತು ಹೊಂದಾಣಿಕೆ ಎರಡು ಶತ್ರು ರಾಷ್ಟ್ರಗಳ ನಡುವೆ  ಹೇಗೆ ಸಂಬಂಧ ಬೆಸೆಯುತ್ತದೆ ಎಂಬುದನ್ನು ತೆಹ್ರಕ್- ಇ - ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಮ್ ಖಾನ್ ವಿವರಿಸಿದ್ದಾರೆ.
ನಾನು ಇಂಗ್ಲೆಂಡ್ ನಲ್ಲಿದ್ದೇನೆ,  ಶಾಂತಿ ಮತ್ತು ಐಕ್ಯತೆಯಿಂದಿದ್ದೇನೆ,  ಇಲ್ಲಿ ಯಾರು ನನ್ನನ್ನು ಶಿಯಾ ಅಥವಾ ಸುನ್ನಿ ಪಂಗಡದವರೇ ಎಂದು ಕೇಳಿಲ್ಲ, ಯಾವ ದೇಶದವರು  ಯಾವ ಪಂಗಡದವರು ಎಂಬದು ಇಲ್ಲಿ ವಿಷಯವೇ ಅಲ್ಲ, ಇಲ್ಲಿ ಯಾವ ವಿರೋಧವಿಲ್ಲದೇ ನಾನು ಆರಾಮಾವಾಗಿದ್ದೇನೆ,  ಇಲ್ಲಿ ಯಾರು ಬೇಕಾದರೂ ಶಾಂತಿ ಮತ್ತು ಒಗ್ಗಟ್ಟಿನಿಂದ ಬದುಕಬಹುದಾಗಿದೆ, 
ಜನಗಳು ಹೊಂದಾಣಿಕೆಯಿಂದ ಬದುಕಲು ಯಾವುದೇ ಅಡ್ಡಿಯಿಲ್ಲ,ಒಂದು ವೇಳೆ ಏನಾದರೂ ವಿಷಯವಿದ್ದರೇ ಅದು ರಾಜಕೀಯ ಉದ್ದೇಶದಿಂದ ಕೂಡಿದ್ದಾಗಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT