ವಿದೇಶ

ಇದು ಬರೀ ಕನಸು: ಸರ್ಜಿಕಲ್ ದಾಳಿ ವೀಡಿಯೋವನ್ನು ತಿರಸ್ಕರಿಸಿದ ಪಾಕ್

Raghavendra Adiga
ಇಸ್ಲಾಮಾಬಾದ್(ಪಾಕಿಸ್ತಾನ): ಭಾರತದ ಮಾದ್ಯಮಗಳಲ್ಲಿ ಪ್ರಸಾರವಾಗುತ್ತಿರುವ 2016ರಲ್ಲಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ್ದ ಸರ್ಜಿಕಲ್ ದಾಳಿಯ ವೀಡಿಯೋ ತುಣುಕುಗಳ ಕುರಿತಂತೆ ಪಾಕಿಸ್ತಾನ ಪ್ರತಿಕ್ರಿಯೆ ನಿಡಿದೆ. ಪಾಕ್ ಈ ವೀಡಿಯೋ ಕ್ಲಿಪ್[ ಗಳನ್ನು ತಾನು ತಿರಸ್ಕರಿಸುವುದಾಗಿ ಹೇಳಿದ್ದು ಭಾರತ,ಸರ್ಕಾರದ ’ವಿಪರೀತ’ ನಡೆ ಇದಾಗಿದೆ ಎಂದು ಖಂಡಿಸಿದೆ.
2016ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಗಡಿ ಗುಂಟ ಭಾರತೀಯ ಸೇನೆ ಆಯೋಜಿಸಿದ್ದ  ಸರ್ಜಿಕಲ್ ದಾಳಿಯ ದೃಶ್ಯಗಳನ್ನು ಸರ್ಕಾರ ಬುಧವಾರ ಬಿಡುಗಡೆ ಮಾಡಿದ್ದು ನಿನ್ನೆಯಿಂದ ದೇಶಾದ್ಯಂತದ ಹಲವಾರು ಮಾದ್ಯಮಗಳು ಈ ವೀಡಿಯೋ ದೃಶ್ಯಗಳನ್ನು ಪ್ರಸಾರ ಮಾಡಿವೆ.
"ಈ ಸರ್ಜಿಕಲ್ ದಾಳಿ ಸಂಬಂಧ ನಾವು ಈಗಾಗಲೇ ಸ್ಪಷ್ಟನೆ ನೀಡಿದ್ದೇವೆ, ಈಗಲೂ ಅದನ್ನೇ ಹೇಳುತ್ತೇವೆ. ಭಾರತೀಯ ಸೇನೆ ಸರ್ಜಿಕಲ್ ದಾಳಿ ವಿಚಾರದಲ್ಲಿ ವಿಲಕ್ಷಣ ಹೇಳಿಕೆಗಳನ್ನು ನೀಡುತ್ತಿದ್ದು ಅದಾವುದು ಸಹ ಸತ್ಯವಲ್ಲ.ಇದೆಲ್ಲ ಕೇವಲ ಕಲ್ಪನೆಯಾಗಿದೆ. ಇದು ಭಾರತೀಯ ಸೇನೆಯ ಕನಸು ಮಾತ್ರವೆಂದು ನಾವು ಸ್ಪಷ್ಟ ಮಾತಿನಲ್ಲಿ ತಿಳಿಸುತ್ತೇವೆ" ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ಹೇಳಿದ್ದಾರೆ.
ಸಿಖ್ ಗುರುದ್ವಾರಕ್ಕೆ ಭಾರತೀಯ ಹೈ ಕಮೀಷನರ್ ಭೇಟಿ ನೀಡಿರುವ ವಿವಾದದ ಬಗ್ಗೆ ಮಾತನಾಡಿದ  ಅವರು ಸಿಖ್ಖರು, ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ವಿವಾದಾತ್ಮಕ ನಡೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದರು.
ಇಲ್ಲಿನ ವಿಷಮ ಪರಿಸ್ಥಿತಿಯ ಕುರಿತಂತೆ ಭಾರತೀಯ ಹೈ ಕಮಿಷನರ್ ಅವರಿಗೆ ಂಆಹಿತಿ ನೀಡಲಾಗಿದ್ದು ಅವರು ತಮ್ಮ ಭೇಟಿಯನ್ನು ರದುಗೊಳಿಸಲು ಒಪ್ಪಿದ್ದಾರೆ.ಒಂದು ಧಾರ್ಮಿಕ ಸಮುದಾಯದ ಭಾವನೆಗಳನ್ನು ರಾಜಕೀಯಗೊಳಿಸುವ ಯಾವುದೇ ಪ್ರಯತ್ನಗಳು ವಿಷಾದನೀಯ ಮತ್ತು ನಾವು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಛೇರಿಯು ತಮ್ಮ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಲು 300 ಕ್ಕಿಂತ ಹೆಚ್ಚಿನ ಸಿಖ್ಖರಿಗೆ ವೀಸಾಗಳನ್ನು ನೀಡಿದೆ  ಯಾತ್ರಿಕರನ್ನು ಅಟ್ಟಾರಿಯಿಂದ ವಾಘಾಗೆ ಸಾಗಿಸಲು ವಿಶೇಷ ರೈಲುಗಳನ್ನು ವ್ಯವಸ್ಥೆಗೊಳಿಸಲಾಗಿದೆ.
ಮುಂಬಯಿ ದಾಳಿಯ ತನಿಖೆಯ ಎಫ್ಐಎ ಅಧಿಕಾರಿಯ ವರ್ಗಾವಣೆ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪಾಕ್ ವಕ್ತಾರರು ಕಳೆದ ಹತ್ತು ವರ್ಷಗಳಿಂದ ಈ ಸಂಬಂಧ ವಿಚಾರಣೆ ನಡೆಯುತ್ತಲಿದೆ ಎಂದಿದ್ದಾರೆ. ಈ ಸಂದರ್ಭ ಉಸ್ತುವಾರಿ ಅಧಿಕಾರಿಗಳು ಬದಲಾಗಿದ್ದಾರೆ ಹೊರತು ನಿಗದಿಯಂತೆಯೇ ವಿಚಾರಣಾ ಕಾರ್ಯ ನಡೆಯುತ್ತಿದೆ ಎಂದು ಅವರು ನುಡಿದರು.
SCROLL FOR NEXT