ಅಮೆರಿಕಾದ ಸೆಂಟ್ರಲ್ ಮಿಚಿಗನ್ ವಿಶ್ವವಿದ್ಯಾನಿಲಯದಲ್ಲಿ ಶೂಟೌಟ್, ಎರಡು ಸಾವು
ಮೌಂಟ್ ಪ್ಲೆಸೆಂಟ್(ಅಮೆರಿಕಾ): ಅಮೆರಿಕಾದ ಸೆಂಟ್ರಲ್ ಮಿಚಿಗನ್ ವಿಶ್ವವಿದ್ಯಾನಿಲಯದದಲ್ಲಿ ಗುಂಡಿನ ದಾಳಿ ನಡೆದಿದ್ದು ಇಬ್ಬರು ಹತರಾಗಿದ್ದಾರೆ.
ವಿಶ್ವವಿದ್ಯಾನಿಲಯದ ಟ್ವೀಟ್ ಪ್ರಕಾರ ನಿಲಯದ ರೆಸಿಡೆಂಟ್ ಹಾಲ್ ನಲ್ಲಿ ಶೂಟೌಟ್ ನಡೆದಿದೆ.
ಗುಂಡಿನ ದಾಳಿ ನಡೆಸಿರುವವರು ವಿದ್ಯಾರ್ಥಿಗಳಲ್ಲ, ಎಂದು ಟ್ವೀಟ್ ನಲ್ಲಿ ಹೇಳಲಾಗಿದ್ದು ಪ್ರಕರಣ ಸಂಬಂಧ .ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳು ಸುರಕ್ಷಿತ ಜಾಗಗಳಿಗೆ ತೆರಳಲು ಸೂಚಿಸಲಾಗಿದೆ.
ಶುಕ್ರವಾರ ಮುಂಜಾನೆ ಮೌಂಟ್ ಪ್ಲೆಸೆಂಟ್ ನ ಕ್ಯಾಂಪ್ ಬೆಲ್ ಹಾಲ್ ಪ್ರದೇಶದಲ್ಲಿ ಘಟನೆ ನಡೆದಿದ್ದು ವಿಶ್ವವಿದ್ಯಾನಿಲಯವು ಶಂಕಿತರ ಬಗೆಗೆ ಬಲವಾದ ಸಂದೇಹ ವ್ಯಕ್ತಪಡಿಸಿದೆ. ಅಲ್ಲದೆ ಈತ ಜೇಮ್ಸ್ ಎರಿಕ್ ಡೇವಿಡ್ ಎನ್ನುವ ಸುಮಾರು 19 ವರ್ಷ ವಯೋಮಾನದ ಕಪ್ಪು ವ್ಯಕ್ತಿ ಎಂದು ಹೇಳಿದೆ.
ಸಧ್ಯ ಕ್ಯಾಂಪಸ್ ಸುತ್ತಲೂ ಹೆಲಿಕಾಪ್ಟರ್ ಹಾಗೂ ಕಾಲ್ನಡಿಗೆ ಮೂಲಕ ಪೋಲೀಸರು ಅಪರಾಧಿಗಳ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಮೌಂಟ್ ಪ್ಲೆಸೆಂಟ್ ಆವರಣದಲ್ಲಿ ನಡೆಯಬೇಕಾಗಿದ್ದ ಎಲ್ಲಾ ತರಗತಿಗಳನ್ನು ರದ್ದುಪಡಿಸಲಾಗಿದೆ.
ಸೆಂಟ್ರಲ್ ಮಿಚಿಗನ್ ವಿಶ್ವವಿದ್ಯಾನಿಲಯದ ಮೌಂಟ್ ಪ್ಲೆಸೆಂಟ್ ನಲ್ಲಿ ಸುಮಾರು 23,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪ್ರದೇಶವು ಲ್ಯಾನ್ಸಿಂಗ್ ನಿಂದ ಸುಮಾರು 112.6 ಕಿಮೀ ದೂರದಲ್ಲಿದೆ.