ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಮಾಫಿಯಾವನ್ನು ಬಯಲಿಗೆಳೆಯಲು ಸಿದ್ಧವಿರುವುದಾಗಿ ಪಾಕಿಸ್ತಾನ್ ತೆಹ್ರರೀಕ್ ಐ ಇನ್ಸಾಪ್ ಮುಖಂಡ ಇಮ್ರಾನ್ ಖಾನ್ ಹೇಳಿದ್ದಾರೆ.
ತನ್ನ ಪಕ್ಷದ ಸಾಮಾಜಿಕ ಜಾಲತಾಣ ತಂಡದೊಂದಿಗೆ ಮಾತನಾಡಿದ ಇರ್ಮಾನ್ ಖಾನ್, 2018ರ ಚುನಾವಣೆಯಲ್ಲಿ ನವಾಜ್ ಶರೀಫ್ ವಿರುದ್ಧ ದೊಡ್ಡದಾದ ಪಂದ್ಯ ಆಡಲು ಕಾಯುತ್ತಿರುವುದಾಗಿ ತಿಳಿಸಿದರು.
ಶರೀಫ್ ಮಾಫಿಯಾ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಹೊಸ ಚಿಂತನೆಗಳನ್ನು ಅಭಿವೃದ್ಧಿಗೊಳಿಸುವಂತೆ ಸಾಮಾಜಿಕ ಜಾಲ ತಾಣದ ತಂಡವನ್ನು ಕೇಳಿದ ಇಮ್ರಾನ್ ಖಾನ್, ನವಾಜ್ ಶರೀಫ್ ರಾಷ್ಟ್ರದ ಸಂಪತ್ತನ್ನು ಕೊಳ್ಳೆ ಹೊಡೆದು ವಿದೇಶದಲ್ಲಿಟ್ಟಿದ್ದಾರೆ ಎಂದು ಅಪಾದಿಸಿದರು.
ಪಾಕಿಸ್ತಾನದಲ್ಲಿನ ಯುವಕರ ಅದೃಷ್ಟವನ್ನು ಮುಂದಿನ ಚುನಾವಣೆ ನಿರ್ಧರಿಸಲಿದೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಜನಪ್ರಿಯತೆ ಹಾಗೂ ಅರ್ಹತೆ ಆಧಾರದ ಮೇಲೆ ಟಿಕೆಟ್ ನೀಡಲಾಗುವುದು, ಒಂದು ವೇಳೆ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಕಂಡುಬಂದರೆ ಸರ್ವೆ ಮಾಡಿಸಲಾಗುವುದು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.