ಹಟಿನ್‌ ಕ್ವಾವ್‌ 
ವಿದೇಶ

ಮಯನ್ಮಾರ್ ಅಧ್ಯಕ್ಷ ಹಟಿನ್‌ ಕ್ವಾವ್‌ ರಾಜೀನಾಮೆ

ಮಯನ್ಮಾರ್ ಅಧ್ಯಕ್ಷ ಹಟಿನ್‌ ಕ್ವಾವ್‌ ಮ್ಮ ಸ್ಥಾನಕ್ಕೆ ರಾಜೀನಾಮೆ ನಿಡಿದ್ದಾರೆ

ಯಾಂಗೋನ್(ಮಯನ್ಮಾರ್): ಮಯನ್ಮಾರ್ ಅಧ್ಯಕ್ಷ ಹಟಿನ್‌ ಕ್ವಾವ್‌ ಮ್ಮ ಸ್ಥಾನಕ್ಕೆ ರಾಜೀನಾಮೆ ನಿಡಿದ್ದಾರೆ."ಜವಾಬ್ದಾರಿಗಳಿಂದ ವಿಶ್ರಾಂತಿ ಪಡೆಯುವ ಸಲುವಾಗಿ  ಕ್ವಾವ್‌ ರಾಜೀನಾಮೆ ಸಲ್ಲಿಸಿದ್ದಾರೆ" ಎಂದು ಅಧ್ಯಕ್ಷರ ಕಛೇರಿಯ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಲಾಗಿದೆ.
ದೇಶದ ನಿಜವಾದ ಅಧ್ಯಕ್ಷರಾದ ಅಂಗ್ ಸಾನ್ ಸೂ ಕಿ ಅವರ ಆಪ್ತರಾಗಿದ್ದ ಕ್ವಾವ್‌ ಸೂ ಕಿ ಅವರ ಆದೇಶದ ಮೇರೆಗೆ ಇಷ್ಟು ದಿನ ಅಧಿಕಾರ ನಿರ್ವಹಿಸಿದ್ದರು.
ದೇಶದ ಮಾಜಿ ಆಡಳಿತಗಾರರಿಂದ ರಚಿತವಾದ ಸಂವಿಧಾನ ಸೂ ಕಿ ಅವರನ್ನು ರಾಷ್ಟ್ರಾಧ್ಯಕ್ಷೆ ಸ್ಥಾನದಲ್ಲಿ ಕೂರಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಸೂ ಕಿ, ಕ್ವಾವ್‌  ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.
ಇದೇ ವೇಳೆ ಹಟಿನ್‌ ಕ್ವಾವ್‌  ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಸ್ಥಲೀಯ ಮಾದ್ಯಮಗಳು ಕೆಲ ದಿನಗಳಿಂದಲೂ ವರದಿ ಮಾಡಿದ್ದವು. ಆದರೆ ಅಧಿಕಾರಿಗಳು ಈ ವರದಿಯನ್ನು ನಿರಾಕರಿಸಿದ್ದಾರೆ. 
ಮುಂದಿನ ಏಳು ಕೆಲಸದ ದಿನಗಳಲ್ಲಿ ಮಯನ್ಮಾರ್ ಗೆ ನೂತನ ಅಧ್ಯಕ್ಷರ ನೇಮಕ ಆಗಲಿದೆ ಎಂದು ಅಧ್ಯಕ್ಷರ ಕಛೇರಿ ಮೂಲಗಳು ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಕಾವೇರಿ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ ಆರಂಭ, ಡಿಕೆಶಿ ಎದುರೇ ‘5 ವರ್ಷ ಸಿದ್ದರಾಮಯ್ಯ ಸಿಎಂ’ ಘೋಷಣೆ ಕೂಗಿದ ಅಭಿಮಾನಿಗಳು..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೊಂದು ಪವರ್ ಶಿಫ್ಟ್: ಅಹಿಂದ ಸಮೀಕರಣಕ್ಕೆ ಮಾಸ್ಟರ್‌ಪ್ಲ್ಯಾನ್, ಸತೀಶ್‌ ಜಾರಕಿಹೊಳಿಗೆ KPCC ಜವಾಬ್ದಾರಿ?

SCROLL FOR NEXT