ವಾಷಿಂಗ್ ಟನ್: ಸ್ವಯಂ ಚಾಲಿತ ಕಾರಿನ ಮೊದಲ ಭೀಕರ ಅಪಘಾತ ಅಮೆರಿಕದ ಅರಿಝೋನಾದಲ್ಲಿ ಸಂಭವಿಸಿದ್ದು, ಅಪಘಾತದ ವಿಡಿಯೋ ಡ್ಯಾಶ್ ಕ್ಯಾಮ್ ನಲ್ಲಿ ಸೆರೆಯಾಗಿದೆ.
ಸ್ವಯಂ ಚಾಲಿತ ಕಾರು ಪಾದಾಚಾರಿ ಮೇಲೆ ಹರಿದಿದ್ದು, ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ ಅಪಘಾತದ ಸೂಚನೆ ಸಿಗುತ್ತಿದ್ದಂತಯೇ ಕೆಳಗೆ ನೋಡುತ್ತಿರುವುದು ಕಂಡುಬಂದಿದೆ. ಪೊಲೀಸರು ಅಪಘಾತದ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಈ ಘಟನೆ ಸಂಭವಿಸಿದ ಬಳಿಕ ಉಬರ್ ಸ್ವಯಂ ಚಾಲಿತ ಕಾರು ಸೇವೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿರುವುದಾಗಿ ತಿಳಿಸಿದೆ.