ಶ್ರೀ ಶ್ರೀನಿವಾಸ ಪೆರಮಾಳ್ ದೇವಾಲಯ 
ವಿದೇಶ

ಸಿಂಗಾಪುರದಲ್ಲಿ 164 ವರ್ಷಗಳ ಹಿಂದಿನ ಹಿಂದೂ ದೇವಾಲಯ ಜೀರ್ಣೋದ್ಧಾರ

164 ವರ್ಷದ ಹಳೇಯ ಹಿಂದಿನ ಹಿಂದೂ ದೇವಾಲಯವನ್ನು ಸಿಂಗಾಪೂರದಲ್ಲಿ ಪುನಸ್ಥಾಪಿಸಲು 20 ಭಾರತೀಯ ಕಲಾವಿದರು ಸಿಂಗಾಪೂರಕ್ಕೆ ...

ಸಿಂಗಾಪೂರ್: 164 ವರ್ಷದ ಹಳೇಯ ಹಿಂದಿನ ಹಿಂದೂ ದೇವಾಲಯವನ್ನು ಸಿಂಗಾಪೂರದಲ್ಲಿ ಪುನಸ್ಥಾಪಿಸಲು 20 ಭಾರತೀಯ ಕಲಾವಿದರು ಸಿಂಗಾಪೂರಕ್ಕೆ ತೆರಳಿದ್ದಾರೆ. 20 ಕೋಟಿ ರೂ ವೆಚ್ಚದಲ್ಲಿ  ನಿರ್ಮಾಣವಾಗುತ್ತಿರುವ ಈ ದೇವಾಲಯವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲಾಗಿದೆ.
ಶ್ರೀ ಶ್ರೀನಿವಾಸ ಪೆರಮಾಳ್ ದೇವಾಲಯ ನಿರ್ಮಾಣಕ್ಕಾಗಿ ಕಳೆದ 1 ವರ್ಷದಿಂದ ಕೆಲಸ ನಡೆಯುತ್ತಿದೆ. ಭಾರತೀಯ ಕೆಲಸಗಾರರ ಜೊತೆ ಮತ್ತಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ.
ಪ್ರಮುಖ ಶಿಲ್ಪಿ ಸೇರಿದಂತೆ 19 ಮಂದಿ ಕರಕುಶಲಗಾರರು ಭಾರತದಿಂದ ಸಿಂಗಾಪೂರ್ ಗೆ ತೆರಳಿದ್ದಾರೆ. ಮೂಲ ದೇವಾಲಯದ ಬಣ್ಣ ಹಚ್ಚುತ್ತಿದ್ದಾರೆ. ದೇವಾಲಯವನ್ನು ಪುನಶ್ಚೇತನಗೊಳಿಸುವುದು ದೊಡ್ಡ ಸವಾಲಾಗಿದ್ದು, ವಿವಿಧ ಶಾಸ್ತ್ರ ಸಂಪ್ರದಾಯಗಳು ನಡೆಯಲಿವೆ.
ಇದೊಂದು ಜೀವಂತ ಸ್ಮಾರಕ ಎಂದು ದೇವಾಲಯ ನಿರ್ವಹಣಾ ಸಮಿತಿ ಅಧ್ಯಕ್ಷ ವೆಲಾಯಪ್ಪನ್ ಕರುಪ್ಪಯ್ಯ ಹೇಳಿದ್ದಾರೆ, ಹಬ್ಬಗಳು ವೇಳೆ ವಿಶೇಷ ಪೂಜೆ ನಡೆಸಲಾಗುತ್ತದೆ. ಈ ಸಮಯದಲ್ಲಿ ಕೆಲಸ ನಿಲ್ಲಿಸಲಾಗುತ್ತದೆ. ನಾವು ರೂಪಿಸಿರುವ ಯೋಜನೆ ಪ್ರಕಾರ ಕೆಲಸ ಸಾಗುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದ್ದಾರೆ.
ದೇವಾಲಯದಲ್ಲಿ ಭಕ್ತಾದಿಗಳು ಪೂಜೆ ಮಾಡಲು ಹೆಚ್ಚಿನ ಸ್ಥಳ ಕಲ್ಪಿಸಲಾಗಿದೆ, ಚಿತ್ರಕಲೆಗಳನ್ನು ಪುನರ್ ಸ್ಥಾಪಿಸುವುದು, ರಾಜಗೋಪುರ, ಕಂಬಗಳು ಮತ್ತು ವಿಮಾನ ಗಳನ್ನು ನಿರ್ಮಿಸಲಾಗುತ್ತಿದೆ.
ದೇವಾಲಯ ಜೀರ್ಣೋದ್ಧಾರ ಕೆಲಸ ಮುಗಿದ ನಂತರ,ಏಪ್ರಿಲ್ 22 ರಂದು ದೇವಾಲಯ ಶುದ್ದೀಕರಣ ಕೆಲಸವಿದ್ದು 39 ಅರ್ಚಕರು ಹಿಂದೂ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಡಲಿದ್ದಾರೆ.
1979, 1992 ಮತ್ತು 2005 ರಲ್ಲಿ ಮೂರು ಬಾರಿ ಪುನಾರಭಿವೃದ್ಧಿ ಕೆಲಸಗಳು ನಡೆದಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT