ಅನ್ಕಾರ(ಟರ್ಕಿ): ಇರಾಕ್ ನ ಕಂದಿಲ್ ಪ್ರಾಂತ್ಯದಲ್ಲಿ ಟರ್ಕಿ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 41 ಉಗ್ರರನ್ನು ಹೊಡೆದುರುಳಿಸಲಾಗಿದೆ.
ಕುರ್ದೀಶ್ ವರ್ಕರ್ಸ್ ಪಾರ್ಟಿಗೆ ಸೇರಿದ ಭಯೋತ್ಪಾದಕರನ್ನು ಬಂಧಿಸುವಂತೆ ಅಥವಾ ಹೊಡೆದುರುಳಿಸುವಂತೆ ಆದೇಶಿಸಲಾಗಿತ್ತು. ಅಂತೆ ಮಾರ್ಚ್ 22ರಂದು ವೈಮಾನಿಕ ದಾಳಿ ನಡೆಸಿತ್ತು.
ಕಳೆದ ಶನಿವಾರ ಟರ್ಕಿಶ್ ಸೇನೆ ಕುರ್ದೀಶ್ ವರ್ಕರ್ಸ್ ಪಾರ್ಟಿ ಹಾಗೂ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದ 3,733 ಉಗ್ರರನ್ನು ಹತ್ಯೆ ಮಾಡಿದ್ದಾಗೆ ತಿಳಿಸಿತ್ತು.