ಸಾಂದರ್ಭಿಕ ಚಿತ್ರ 
ವಿದೇಶ

ಚೀನಾ ಭೀತಿಯಿಂದ ರಕ್ಷಣಾ ವೆಚ್ಚ ಹೆಚ್ಚಿಸಿದ ಭಾರತ- ಜಪಾನ್

ಜಾಗತಿಕ ಶಸ್ತ್ರಾಸ್ತ್ರ ವೆಚ್ಚ ವರದಿ ಪ್ರಕಾರ ಚೀನಾದ ಭೀತಿಯಿಂದಾಗಿ ಭಾರತ, ಜಪಾನ್ ಸೇರಿದಂತೆ ಹಲವು ಏಷ್ಯಾ ರಾಷ್ಟ್ರಗಳು ರಕ್ಷಣಾ ವೆಚ್ಚವನ್ನು ಹೆಚ್ಚಿಸಿವೆ.

ನವದೆಹಲಿ : ಜಾಗತಿಕ ಶಸ್ತ್ರಾಸ್ತ್ರ ವೆಚ್ಚ ವರದಿ ಪ್ರಕಾರ ಚೀನಾದ ಭೀತಿಯಿಂದಾಗಿ ಭಾರತ, ಜಪಾನ್ ಸೇರಿದಂತೆ ಹಲವು ಏಷ್ಯಾ ರಾಷ್ಟ್ರಗಳು ರಕ್ಷಣಾ ವೆಚ್ಚವನ್ನು ಹೆಚ್ಚಿಸಿವೆ.

 ಕಳೆದ ವರ್ಷದ ಭಾರತ ರಕ್ಷಣಾ ವೆಚ್ಚ ಶೇ, 5. 5 ರಿಂದ  63. 9 ಬಿಲಿಯನ್ ಡಾಲರ್ ಗೆ ಹೆಚ್ಚಳವಾಗಿದೆ.  ರಕ್ಷಣಾ ಕ್ಷೇತ್ರದಲ್ಲಿ ಅತಿ ಹೆಚ್ಚು ವೆಚ್ಚ ಮಾಡುವ ಐದು ರಾಷ್ಟ್ರಗಳ ಪೈಕಿ    ಫ್ರಾನ್ಸ್  ಒಂದಾಗಿದೆ ಎಂದು ಸ್ಟಾಕ್ ಹೋಮ್ ನ  ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ ಬಿಡುಗಡೆಗೊಳಿಸಿರುವ  ವರದಿಯಲ್ಲಿ ತಿಳಿಸಲಾಗಿದೆ.
 
ಕಳೆದ ವರ್ಷದಲ್ಲಿನ  ರಕ್ಷಣಾ ವೆಚ್ಚದಲ್ಲಿ ಅಮೆರಿಕಾ, ಚೀನಾ, ಸೌದಿ ಅರಬೀಯಾ, ಮತ್ತು ರಷ್ಯಾ ರಾಷ್ಟ್ರಗಳು   ಅತಿ ಹೆಚ್ಚು ವೆಚ್ಚ ಮಾಡಿದ ಉಳಿದ ರಾಷ್ಟ್ರಗಳಾಗಿವೆ. ಚೀನಾ ಹಾಗೂ ಪಾಕಿಸ್ತಾನದ ಭೀತಿಯಿಂದಾಗಿ ಭಾರತ ಅತ್ಯಾಧುನಿಕ ರಕ್ಷಣಾ ಉಪಕರಣಗಳನ್ನು ಖರೀದಿಸುವ ಯೋಜನೆಯನ್ನು ವಿಸ್ತರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಚೀನಾ ಮತ್ತಿತರ ನೆರಹೊರೆಯ ರಾಷ್ಟ್ರಗಳ ಭೀತಿಯಿಂದಾಗಿ ಏಷ್ಯಾ ರಾಷ್ಟ್ರಗಳು ರಕ್ಷಣಾ ಉಪಕರಣಗಳಿಗೆ ಹೆಚ್ಚು ವೆಚ್ಚ ಮಾಡುತ್ತಿವೆ ಎಂದು ಎಸ್ ಐ ಪಿಆರ್ ಐ  ಹಿರಿಯ ಸಂಶೋಧಕ ಸೈಮನ್ ವೆಜಿಮಾನ್ ತಿಳಿಸಿದ್ದಾರೆ.

ಹೊಸ ಪರಮಾಣು ಕ್ಷಿಪಣಿಯಿಂದಾಗಿ ಭಾರತ ಯಾವುದೇ ಪ್ರದೇಶದಲ್ಲಿಯಾದರೂ ಚೀನಾವನ್ನು ಎದುರಿಸುವುದಾಗಿ ಸರ್ಕಾರ ಹೇಳುತ್ತಿದೆ. ಚೀನಾ  ಮತ್ತು ಅಮೆರಿಕಾ ವಿಶ್ವದಲ್ಲಿಯೇ ಹೆಚ್ಚು ರಕ್ಷಣಾ ವೆಚ್ಚ ಮಾಡುತ್ತಿದ್ದು, ಕಳೆದ ವರ್ಷ ಕ್ರಮವಾಗಿ ಅಮೆರಿಕಾ 228 ಬಿಲಿಯನ್ ಹಾಗೂ ಚೀನಾ 610 ಬಿಲಿಯನ್ ಡಾಲರ್  ವೆಚ್ಚ ಮಾಡಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

 ಏಷ್ಯಾದಲ್ಲಿ ಚೀನಾ ಹೊರತುಪಡಿಸಿದರೆ  ಭಾರತವೇ ಹೆಚ್ಚು ಪ್ರಮಾಣದಲ್ಲಿ ರಕ್ಷಣಾ ವೆಚ್ಚ ಮಾಡುತ್ತಿದೆ. ಚೀನಾ 2018 ರಲ್ಲಿ ಶೇ. 8. 1 ರಷ್ಟು ವೆಚ್ಚ ಮಾಡಿದೆ. 2016 ನೇ ಸಾಲಿಗೆ ಹೋಲಿಸಿದ್ದರೆ 2017ರಲ್ಲಿ ಶೇ.5.6 ರಷ್ಟು ಹೆಚ್ಚಳವಾಗಿತ್ತು.

ದೋಕ್ಲಾಮ್ ಗಡಿ ಬಿಕ್ಕಟ್ಟಿನಿಂದಾಗಿ ಭಾರತ ಹಾಗೂ ಚೀನಾದೇಶಗಳು  ಕಳೆದ ವರ್ಷ ಗಡಿ ಪ್ರದೇಶದಲ್ಲಿ  72 ದಿನಗಳ ಕಾಲ ಸೈನ್ಯವನ್ನು ನಿಯೋಜಿಸಿದ್ದವು. ಈ ಸಮಸ್ಯೆ ಉಭಯ ದೇಶಗಳ ನಡುವೆ ಹಲವು ದಶಕಗಳಿಂದ ಪರಿಹಾರವಾಗದೆ ಹಾಗೇ ಉಳಿದಿದ್ದು, ಆಗಾಗ್ಗೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇರುತ್ತದೆ.

ಅಮೆರಿಕಾದ ಭೌಗೋಳಿಕ ರಾಜಕೀಯ ಜಾಗೃತ ಕಂಪನಿ ಬಿಡುಗಡೆಗೊಳಿಸಿದ ಉಪಗ್ರಹ  ಚಿತ್ರದಲ್ಲಿ  ಗಡಿ ಪ್ರದೇಶದಲ್ಲಿ ಉಭಯ ದೇಶಗಳ ಸೈನಿಕರ ನಿಯೋಜನೆ ಕಂಡುಬಂದಿತ್ತು. ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಹಾಗೂ ಭಾರತದ ಪ್ರಧಾನಿ ನರೇಂದ್ರಮೋದಿ ಕಳೆದ ವಾರ ಮಾತುಕತೆ ನಡೆಸಿದ್ದಾರೆ. ಆದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.

ಜಾಗತಿಕ ಒಟ್ಟು ಉತ್ಪಾದನೆಯಲ್ಲಿ ಕಳೆದ ವರ್ಷ 1.73 ಟ್ರಿಲಿಯನ್  ನಷ್ಟಿದ್ದ ವಿಶ್ವ ರಕ್ಷಣಾ ವೆಚ್ಚ  ಶೇ, 2.2 ರಷ್ಟು ಹೆಚ್ಚಳವಾಗಿದೆ ಎಂದು ಎಸ್ ಐಪಿಆರ್ ಐ ಸಂಸ್ಥೆ ತಿಳಿಸಿದೆ.

 ಆದಾಗ್ಯೂ, ಜಪಾನ್ ರಕ್ಷಣಾ ವೆಚ್ಚದಲ್ಲಿ 8 ನೇ ಸ್ಥಾನ ಪಡೆದಿದೆ.  ಏಪ್ರಿಲ್ ನಲ್ಲಿ ಪ್ರಕಟಿಸಿದ ಬಜೆಟ್ ನಲ್ಲಿ ರಕ್ಷಣಾ ವೆಚ್ಚಕ್ಕಾಗಿ ಶೇ, 1.3 ರಿಂದ 5.19 ಟ್ರಿಲಿಯನ್ ವರೆಗೂ ಹೆಚ್ಚಿಸಲಾಗಿದೆ.  2012ರಿಂದ ಇದ್ದ ನೀತಿಯನ್ನು ಬದಲಿಸಲಾಗಿದ್ದು, ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ

.ಚೀನಾ ಹಾಗೂ ಉತ್ತರ ಕೊರಿಯಾ ಭೀತಿಯಿಂದಾಗಿ  ಜಪಾನ್ ಸುರಕ್ಷತೆ ಕಾರ್ಯತಂತ್ರಕ್ಕೆ ಹೆಚ್ಚಿನ ಗಮನ ಹರಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT