ಕಾಬೂಲ್: ಆಫ್ಘಾನಿಸ್ತಾನದ ಬಾಗ್ಲಾನ್ ಪ್ರಾಂತ್ಯದಲ್ಲಿ ಶಸ್ತ್ರಾಸ್ತ್ರದಾರಿಯೊಬ್ಬ ಆರು ಮಂದಿ ಭಾರತೀಯರನ್ನು ಅಪಹರಿಸಿರುವುದಾಗಿ ವರದಿಯಾಗಿದೆ.
ಆಫ್ಘಾನಿಸ್ತಾನದಲ್ಲಿನ ಭಾರತೀಯ ಮೂಲಸೌಕರ್ಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಭಾರತೀಯರನ್ನು ಬಂದೂಕುಧಾರಿಯೊಬ್ಬ ಅಪಹರಣ ಮಾಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕೆಲಸಕ್ಕಾಗಿ ತೆರಳುತ್ತಿದ್ದಾಗ ಭಾರತೀಯರನ್ನು ಅಪಹರಿಸಲಾಗಿದೆ. ಈ ಕೃತ್ಯವನ್ನು ತಾಲಿಬಾನ್ ಸಂಘಟನೆ ಉಗ್ರರು ಮಾಡಿರಬಹುದು ಎಂದು ಬಾಗ್ಲಾನ್ ಪ್ರಾಂತ್ಯದ ಕೌನ್ಸಿಲ್ ಶಂಕಿಸಿದೆ.
ಇನ್ನು ಈ ಕೃತ್ಯದ ಕುರಿತು ಯಾವುದೇ ಉಗ್ರ ಸಂಘಟನೆ ಹೊಣೆ ಹೊತ್ತಿಕೊಂಡಿದೆ.